News Karnataka Kannada
Thursday, May 02 2024
ದೇಶ

ವಿಧವೆಗೆ ಗರ್ಭಪಾತಕ್ಕೆ ಅವಕಾಶ ನಿರಾಕರಿಸಿದ ಸುಪ್ರೀಂ !

26ರ ಹರೆಯದ ವಿಧವೆಯೊಬ್ಬರಿಗೆ 32 ವಾರಗಳ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಸುಪ್ರೀಂ ಕೋರ್ಟ್ ಬುಧವಾರ(ಜ.31) ನಿರಾಕರಿಸಿದೆ. ಭ್ರೂಣದಲ್ಲಿ ಯಾವುದೇ ಅಸಹಜತೆ ಇಲ್ಲ. ಇದು ಸಾಮಾನ್ಯ ಭ್ರೂಣ ಮತ್ತು ಯಾವುದೇ ಅಪಾಯವಿಲ್ಲ ಎಂದು ವೈದ್ಯಕೀಯ ಮಂಡಳಿಯು ಹೇಳಿದೆ. ಈ ಅಭಿಪ್ರಾಯ ಪರಿಗಣಿಸಿದ ಸುಪ್ರೀಂ  ಗರ್ಭಪಾತಕ್ಕೆ ಅವಕಾಶ ನಿರಾಕರಿಸಿದೆ.
Photo Credit : News Kannada

ವದೆಹಲಿ: 26ರ ಹರೆಯದ ವಿಧವೆಯೊಬ್ಬರಿಗೆ 32 ವಾರಗಳ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಸುಪ್ರೀಂ ಕೋರ್ಟ್ ಬುಧವಾರ(ಜ.31) ನಿರಾಕರಿಸಿದೆ. ಭ್ರೂಣದಲ್ಲಿ ಯಾವುದೇ ಅಸಹಜತೆ ಇಲ್ಲ. ಇದು ಸಾಮಾನ್ಯ ಭ್ರೂಣ ಮತ್ತು ಯಾವುದೇ ಅಪಾಯವಿಲ್ಲ ಎಂದು ವೈದ್ಯಕೀಯ ಮಂಡಳಿಯು ಹೇಳಿದೆ. ಈ ಅಭಿಪ್ರಾಯ ಪರಿಗಣಿಸಿದ ಸುಪ್ರೀಂ  ಗರ್ಭಪಾತಕ್ಕೆ ಅವಕಾಶ ನಿರಾಕರಿಸಿದೆ.

ನ್ಯಾ. ಬೇಲಾ ಎಂ. ತ್ರಿವೇದಿ ಮತ್ತು ನ್ಯಾ. ಪ್ರಸನ್ನ ಬಾಲಚಂದ್ರ ವರಾಳೆ ಅವರನ್ನೊಳಗೊಂಡ ಪೀಠವು ತನ್ನ 29 ವಾರಗಳ ಭ್ರೂಣವನ್ನು ಅಂತ್ಯಗೊಳಿಸಲು ಜನವರಿ 4 ರ ಆದೇಶವನ್ನು ಹಿಂಪಡೆಯಲು ದೆಹಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ವಿಧವೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿದೆ.

ಇದು 32 ವಾರಗಳ ಭ್ರೂಣ. ಅದನ್ನು ಹೇಗೆ ಕೊನೆಗೊಳಿಸಬಹುದು? ವೈದ್ಯಕೀಯ ಮಂಡಳಿ ಕೂಡ ಇದನ್ನು ಅಂತ್ಯಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಇದು ಎರಡು ವಾರಗಳ ವಿಷಯವಾಗಿದೆ, ನೀವು ಬಯಸಿದರೆ ಅದನ್ನು ದತ್ತು ಪಡೆಯಲು ನೀಡಬಹುದು ಎಂದು ಪೀಠ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು