ಉನ್ನಾವೊ: ಅಪರಿಚಿತ ವಾಹನವೊಂದು ಆಂಬ್ಯುಲೆನ್ಸ್ ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಮತ್ತು ಆಕೆಯ ಮೂವರು ಹೆಣ್ಣುಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ಉತ್ತರಪ್ರದೇಶದ ಉನ್ನಾವೊದಲ್ಲಿ ನಡೆದಿದೆ.
ಮೃತ ಸವಿತಾ ಮುಂಜಾನೆ ಮೃತಪಟ್ಟ ಪತಿಯ ಶವವನ್ನು ತರುತ್ತಿದ್ದರು.
ಅಪಘಾತದಲ್ಲಿ ಅವರ ಮೂವರು ಹೆಣ್ಣುಮಕ್ಕಳು ಸಹ ಸಾವನ್ನಪ್ಪಿದ್ದಾರೆ ಮತ್ತು ನಾಲ್ಕನೇ ಮಗಳನ್ನು ಕಾನ್ಪುರ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿ ದಾಖಲಿಸಲಾಗಿದೆ.
ಡಿಕ್ಕಿಯ ಪರಿಣಾಮವು ತುಂಬಾ ದೊಡ್ಡದಾಗಿದ್ದು, ಆಂಬ್ಯುಲೆನ್ಸ್ ತುಂಡು ತುಂಡಾಗಿದೆ ಎಂದು ಸರ್ಕಲ್ ಆಫೀಸರ್ ದೀಪಕ್ ಸಿಂಗ್ ತಿಳಿಸಿದ್ದಾರೆ. ಅಪಘಾತದ ನಂತರ ಆಂಬ್ಯುಲೆನ್ಸ್ ಚಾಲಕ ಕಾಣೆಯಾಗಿದ್ದಾನೆ.