ಲಕ್ನೋ: ಉತ್ತರಪ್ರದೇಶದಲ್ಲಿ ಮಥುರಾ ರೈಲ್ವೆ ಜಂಕ್ಷನ್ ಬಳಿ ಇಎಮ್ಯು ರೈಲು ಹಳಿತಪ್ಪಿ ಪ್ಲಾಟ್ಫಾರಂಗೆ ನುಗ್ಗಿದ್ದು, ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ.
ರೈಲು ಶುಕರ್ ಬಸ್ತಿಯಿಂದ ಮಥುರಾ ರೈಲ್ವೆ ಜಂಕ್ಷನ್ ಬಳಿ ಆಗಮಿಸುತ್ತಿದ್ದಂತೆಯೇ ರೈಲು ಹಳಿತಪ್ಪಿ ಪ್ಲಾಟ್ಫಾರಂಗೆ ನುಗ್ಗಿದೆ. ಈ ವೇಳೆ ರೈಲ್ವೆ ನಿಲ್ದಾಣದಲ್ಲಿ ನೂಕುನುಗ್ಗಲು ಉಂಟಾಗಿ ಹಲವರಿಗೆ ಗಾಯಗಳಾಗಿವೆ.
ಉತ್ತರ ಪ್ರದೇಶದ ಮಥುರಾ ಜಂಕ್ಷನ್ನಲ್ಲಿ ತಡರಾತ್ರಿ ರೈಲು ಅಪಘಾತ ಸಂಭವಿಸಿದೆ. ರೈಲು ಶಕೂರ್ ಬಸ್ತಿಯಿಂದ ಬರುತ್ತಿತ್ತು. ಎಲ್ಲಾ ಪ್ರಯಾಣಿಕರು ರೈಲಿನಿಂದ ಇಳಿದಿದ್ದಾರೆ. ಈ ವೇಳೆ ನೂಕುನುಗ್ಗಲು ಉಂಟಾಗಿ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಮಥುರಾ ರೈಲ್ವೆ ನಿಲ್ದಾಣದ ನಿರ್ದೇಶಕ ಎಸ್.ಕೆ.ಶ್ರೀವಾಸ್ತವ ಹೇಳಿದ್ದಾರೆ.