ನೋಯ್ಡಾ: ಉತ್ತರಪ್ರದೇಶದ ಗ್ರೇಟರ್ ನೋಯ್ಡಾ ಎಕ್ಸ್ಪ್ರೆಸ್ವೇಯಲ್ಲಿ ಚಲಿಸುವ ಎಸಿ ಬಸ್ನಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಚಲಿಸುತ್ತಿದ್ದ ಬಸ್ನಲ್ಲಿದ್ದ ಸುಮಾರು 60 ಪ್ರಯಾಣಿಕರು ತಮ್ಮನ್ನು ರಕ್ಷಿಸಿಕೊಳ್ಳಲು ಬಸ್ನಿಂದ ಹಾರಿದ್ದಾರೆ. ಸೆಕ್ಟರ್ -37 ನೋಯ್ಡಾದಿಂದ ಬಿಹಾರದ ಸಿವಾನ್ಗೆ ಹೋಗುತ್ತಿದ್ದ ಖಾಸಗಿ ಡಬಲ್ ಡೆಕ್ಕರ್ AC ಬಸ್ನಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ.
ಎಸಿ ಬಸ್ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಹಾಗೂ ನಿರ್ವಾಹಕ ತಕ್ಷಣ ಬಸ್ನಲ್ಲಿದ್ದ ಸುಮಾರು 60 ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗೆ ಇಳಿಸೋ ಪ್ರಯತ್ನ ಮಾಡಿದ್ದಾರೆ. ಬೆಂಕಿಯ ತೀವ್ರತೆಗೆ ಬಸ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
A ac bus going from Noida to Siwan (Bihar) caught fire. 60 passengers were rescued safely. Fire brought under control. This accident happened on the expressway connecting Noida to Greater Noida. #Noida #Up pic.twitter.com/fIR0NgS988
— Siraj Noorani (@sirajnoorani) November 15, 2023