News Karnataka Kannada
Friday, May 10 2024
ಉತ್ತರ ಪ್ರದೇಶ

ಪತ್ನಿ ಮಕ್ಕಳನ್ನು ಕೊಲೆಗೈದು ಆತ್ಮಹತ್ಯೆಗೆ ಶರಣಾದ ವೈದ್ಯ

New Project (25)
Photo Credit : News Kannada

ಲಕ್ನೋ: ಆಘಾತಕಾರಿ ಘಟನೆಯೊಂದರಲ್ಲಿ ರೈಲ್ವೆ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದ ವೈದ್ಯರೊಬ್ಬರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ರಾಯ್ ಬರೇಲಿಯ ರೈಲ್ವೇಸ್ ಕಾಲೋನಿಯಲ್ಲಿ ನಡೆದಿದೆ. ರೈಲ್ವೆ ಇಲಾಖೆಯಲ್ಲಿ ವೈದ್ಯಕೀಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕಣ್ಣಿನ ತಜ್ಞ ಡಾ.ಅರುಣ್ ಕುಮಾರ್ ಅವರನ್ನು ರಾಯ್ ಬರೇಲಿಯಲ್ಲಿರುವ ಮಾಡರ್ನ್ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು ಎನ್ನಲಾಗಿದೆ.‌ ಮಿರ್ಜಾಪುರದ ನಿವಾಸಿಯಾಗಿರುವ ಡಾ.ಕುಮಾರ್ ಅವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ರಾಯ್ ಬರೇಲಿಯ ರೈಲ್ವೇ ಕ್ವಾರ್ಟರ್ಸ್‌ನಲ್ಲಿ ವಾಸವಾಗಿದ್ದರು.

ಕಳೆದ ಭಾನುವಾರ ನೆರೆಹೊರೆಯವರಿಗೆ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ ಆ ಬಳಿಕ ಯಾರ ಕಣ್ಣಿಗೂ ಈ ಕುಟುಂಬ ಸದಸ್ಯರು ಕಾಣಲಿಲ್ಲ ಇದರಿಂದ ಅನುಮಾನಗೊಂಡ ಅಕ್ಕಪಕ್ಕದ ಮನೆಯವರು ಹಾಗೂ ವೈದ್ಯರ ಸಹೋದ್ಯೋಗಿಗಳು ಮನೆಯ ಬಳಿ ಬಂದು ಬೆಲ್ ಮಾಡಿದ್ದಾರೆ ಆದರೆ ಮನೆಯ ಒಳಗಿಂದ ಯಾವುದೇ ಸದ್ದು ಕೇಳಿಸಲಿಲ್ಲ ಆದರೆ ಮನೆಯ ಒಳಗಿನಿಂದ ಬಾಗಿಲು ಹಾಕಿತ್ತು ಇದನ್ನು ಕಂಡು ಸಂಶಗೊಂಡ ಸಹೋದ್ಯೋಗಿಗಳು ಮನೆಯ ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ಒಳಗೆ ವೈದ್ಯ, ಅವರ ಪತ್ನಿ ಅರ್ಚನಾ, ಮಗಳು ಆದಿವಾ (12) ಮತ್ತು ಮಗ ಆರವ್ (40) ಅವರ ಮೃತದೇಹ ಪತ್ತೆಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು