ನೋಯ್ಡಾ: ಸ್ವಯಂಘೋಷಿತ ದೇವಮಾನವ ಭಾಗೇಶ್ವರ್ ಧಾಮ್ ಮುಖ್ಯಸ್ಥ ಧೀರೇಂದ್ರ ಶಾಸ್ತ್ರಿ ಅವರ ಸತ್ಸಂಗ ಕಾರ್ಯಕ್ರಮದಲ್ಲಿ ಸ್ವಯಂಸೇವಕನೊಬ್ಬ ಮಹಿಳೆಯನ್ನು ಎತ್ತಿ ಎಸೆದಿದ್ದು, ಈ ವೇಳೆ ಮೂಕ ಪ್ರೇಕ್ಷಕನಂತೆ ನಿಂತಿದ್ದ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಬುಧವಾರ ಈ ಘಟನೆ ನಡೆದಿದ್ದು ವಿಡಿಯೋ ವೈರಲ್ ಆಗಿದೆ. ಪೊಲೀಸ್ ಅಧಿಕಾರಿ ಸ್ವಯಂ ಸೇವಕನ ಕೃತ್ಯವನ್ನು ನಿಂತು ನೋಡುತ್ತಿರುವ ದೃಶ್ಯ ವಿಡಿಯೋದಲ್ಲಿ ದಾಖಲಾಗಿದ್ದು, ಮಹಿಳೆಯನ್ನು ಎತ್ತಿಕೊಂಡು ಹೋಗಿ ಬ್ಯಾರಿಕೇಡ್ ನ ಇನ್ನೊಂದು ಬದಿಯಲ್ಲಿ ಕುಳಿತಿದ್ದ ಪ್ರೇಕ್ಷಕರತ್ತ ಎಸೆಯುತ್ತಿರುವ ದೃಶ್ಯವಿದೆ. ಈ ಘಟನೆ ಬಳಿಕ ಎಸ್ ಐ ರಾಮ್ಶಂಕರ್ ಅವರನ್ನು ಅಮಾನತು ಮಾಡಲಾಗಿದೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಹುಡುಕಾಟ ನಡೆದಿದೆ.