News Karnataka Kannada
Monday, May 13 2024
ಉತ್ತರ ಪ್ರದೇಶ

ಬಾಲಕಿ ಮೇಲೆ ಸ್ನೇಹಿತನ ತಂದೆಯಿಂದ ಅತ್ಯಾಚಾರ: ಆರೋಪಿ ಬಂಧನ

6 ವರ್ಷದ ಬಾಲಕಿ‌ ಮೇಲೆ  ಅತ್ಯಾಚಾರವೆಸಗಿದ ಪೈಶಾಚಿಕ ಕೃತ್ಯ ಬೆಂಗಳೂರಿನ ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಮೇಡಹಳ್ಳಿಯಲ್ಲಿ  ನಡೆದಿದೆ.
Photo Credit : IANS

ಮುಜಾಫರ್ ನಗರ: ಸ್ಥಳೀಯ ಧಾರ್ಮಿಕ ಕೋಚಿಂಗ್ ಸೆಂಟರ್ ಗೆ ಚಾಪೆ ಖರೀದಿಸಲು ದೇಣಿಗೆ ಸಂಗ್ರಹಿಸಲು ಮನೆಗೆ ಹೋಗಿದ್ದ 11 ವರ್ಷದ ಬಾಲಕಿಯ ಮೇಲೆ ಆಕೆಯ ಸ್ನೇಹಿತನ ತಂದೆಯೇ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ.

ವಿದ್ಯಾರ್ಥಿಗಳಿಗೆ ಚಾಪೆ ಖರೀದಿಸಲು ಸ್ಥಳೀಯ ಪ್ರತಿ ಮನೆಯಿಂದ 10 ರೂ.ಗಳನ್ನು ಸಂಗ್ರಹಿಸುವ ಉದ್ದೇಶದಿಂದ ಕೋಚಿಂಗ್ ಸೆಂಟರ್ನ ಪಾದ್ರಿ ಬಾಲಕಿಯನ್ನು ಕಳುಹಿಸಿದ್ದಾರೆ ಎಂದು ಬಾಲಕಿ ತಂದೆ ಸುದ್ದಿಗಾರರಿಗೆ ತಿಳಿಸಿದರು.

‘ಆರೋಪಿ ಮನೆಯಲ್ಲಿ ಒಬ್ಬನೇ ಇದ್ದಾಗ ನನ್ನ ಮಗಳನ್ನು ಹಿಡಿದು, ಅವಳ ಕೈಗಳನ್ನು ಕಟ್ಟಿ, ಅವಳ ಬಾಯಿಗೆ ಟೇಪ್ ಹಾಕಿ ಅತ್ಯಾಚಾರ ಎಸಗಿದ್ದಾನೆ’. ಈ ಬಗ್ಗೆ ನಾವು ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಬಾಲಕಿ ತಂದೆ ತಿಳಿಸಿದರು.

ಸಂತ್ರಸ್ತೆಯ ಕುಟುಂಬವು ನೀಡಿದ ದೂರಿನ ಆಧಾರದ ಮೇಲೆ ನಗರ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 376 ಎಬಿ (ಹನ್ನೆರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಶಿಕ್ಷೆ), 342 ( ಬಂಧನಕ್ಕೆ ಶಿಕ್ಷೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ಮತ್ತು ಲೈಂಗಿಕ ಅಪರಾಧದಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಡಿಎಸ್ಪಿ ಆಯುಷ್ ವಿಕ್ರಮ್ ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ.

ನಗರ ಕೊಟ್ವಾಲಿ ಎಸ್ಎಚ್ಒ ಮಹಾವೀರ್ ಸಿಂಗ್ ಮಾತನಾಡಿ,  ‘ಮಾಹಿತಿಯ ನಂತರ, ಪೊಲೀಸ್ ತಂಡವು ಶಾಮ್ಲಿ ಬಸ್ ನಿಲ್ದಾಣದ ಬಳಿ ಆರೋಪಿಯನ್ನು ಬಂಧಿಸಿದೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ. ಅಪ್ರಾಪ್ತ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು