News Karnataka Kannada
Friday, May 03 2024
ಉತ್ತರ ಪ್ರದೇಶ

‘ಸಮಾಜವಾದಿ’ ಸ್ಥಾಪನೆಯಾದ ದಿನ, ರಾಮ ರಾಜ್ಯ ಸ್ಥಾಪನೆಯಾಗುತ್ತದೆ; ಅಖಿಲೇಶ್‌ ಯಾದವ್‌

Akhilesh Yadav
Photo Credit :

ಲಖನೌ : ವಿಧಾನಸಭೆ ಚುನಾವಣೆ ನಂತರ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಸರ್ಕಾರ ರಚಿಸುವುದಾಗಿಯೂ, ನಂತರ ರಾಮ ರಾಜ್ಯ ಸ್ಥಾಪನೆಯಾಗುವುದಾಗಿಯೂ ಪ್ರತಿದಿನ ಶ್ರೀಕೃಷ್ಣ ಕನಸಿನಲ್ಲಿ ಬಂದು ಹೇಳುತ್ತಿದ್ದಾನೆ ಎಂದು ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಹೇಳಿದ್ದಾರೆ.

ಬಿಜೆಪಿಯ ಬಹ್ರೈಚ್ ಶಾಸಕಿ ಮಾಧುರಿ ವರ್ಮಾ ಅವರ ಸೇರ್ಪಡೆ ಸಮಾರಂಭದಲ್ಲಿ ಮಾತನಾಡಿರುವ ಅಖಿಲೇಶ್‌ ಯಾದವ್‌, ಶ್ರೀಕೃಷ್ಣ ಕನಸಿನಲ್ಲಿ ಬರುತ್ತಿರುವುದಾಗಿ ಹಾಸ್ಯಭರಿತವಾಗಿ, ಲಘುಬಗೆಯಲ್ಲಿ ಹೇಳಿದರು.

ಬಹ್ರೈಚ್‌ ಜಿಲ್ಲೆಯ ನಾನ್ಪಾರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬಿಜೆಪಿಯ ಮಾಧುರಿ ವರ್ಮಾ ಸೋಮವಾರ ಎಸ್‌ಪಿ ಸೇರ್ಪಡೆಯಾದರು. ಮಾಧುರಿ ಸೇರ್ಪಡೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದ ಯಾದವ್ ಅವರು, ಉತ್ತರ ಪ್ರದೇಶದಲ್ಲಿ ಎಸ್‌ಪಿ ಸರ್ಕಾರ ರಚಿಸುವ ವಿಶ್ವಾಸ ವ್ಯಕ್ತಪಡಿಸಿದರು.

‘ರಾಮರಾಜ್ಯಕ್ಕೆ ಸಮಾಜವಾದವು ಮಾರ್ಗವಾಗಿದೆ. ‘ಸಮಾಜವಾದ’ ಸ್ಥಾಪನೆಯಾದ ದಿನ, ರಾಜ್ಯದಲ್ಲಿ ರಾಮ ರಾಜ್ಯ ಸ್ಥಾಪನೆಯಾಗುತ್ತದೆ. ಉತ್ತರ ಪ್ರದೇಶದಲ್ಲಿ ನಮ್ಮ ಸರ್ಕಾರ ಬರಲಿದೆ ಎಂದು ಹೇಳಲು ಶ್ರೀಕೃಷ್ಣ ಪ್ರತಿ ರಾತ್ರಿ ನನ್ನ ಕನಸಿನಲ್ಲಿ ಬರುತ್ತಾನೆ,’ ಎಂದು ಅಖಿಲೇಶ್‌ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು