News Karnataka Kannada
Thursday, May 02 2024
ಉತ್ತರ ಪ್ರದೇಶ

ಲಖಿಂಪುರ್ ಬೇರಿ ರೈತರ ಹತ್ಯೆ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Mangaloar Protest
Photo Credit :
ಮಂಗಳೂರು:  ಉತ್ತರಪ್ರದೇಶ ಲಖಿಂಪುರ್ ಬೇರಿ ಜಿಲ್ಲೆಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಕೇಂದ್ರ ಸಚಿವರ ಬೆಂಗಾವಲು ವಾಹನ ಹರಿಸಿ 4 ಮಂದಿ ರೈತರ ಹತ್ಯೆ ಮಾಡಿರುವುದನ್ನು ಖಂಡಿಸಿ,ವಿವಿಧ ರೈತ ಕಾರ್ಮಿಕ ದಲಿತ ಸಂಘಟನೆಗಳ ಜಂಟಿ ನೇತ್ರತ್ವದಲ್ಲಿ ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು._
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ರಾಜ್ಯ ರೈತ ಸಂಘದ ರಾಜ್ಯ ನಾಯಕರಾದ ರವಿಕಿರಣ್ ಪೂನಚರವರು, *ರೈತ ವಿರೋಧಿಯಾದ ಕ್ರಷಿ ಕಾಯಿದೆಗಳ ವಿರುದ್ದ ಕಳೆದ 10 ತಿಂಗಳಿನಿಂದ ದೇಶದ ರೈತರು ಸಮರಧೀರ ಹೋರಾಟದಲ್ಲಿ ತೊಡಗಿದ್ದರೂ ಕನಿಷ್ಠ ರೈತರ ಅಹವಾಲನ್ನು ಆಲಿಸಲು ಸಿದ್ದವಿಲ್ಲದ ನರೇಂದ್ರ ಮೋದಿ ಸರಕಾರವು ರೈತ ಹೋರಾಟವನ್ನು ಅಪಹಾಸ್ಯ ಮಾಡುತ್ತಿದ್ದು, ಇಲ್ಲಸಲ್ಲದ ಅಪಪ್ರಚಾರವನ್ನು ಮಾಡುತ್ತಿದೆ.ಮಾತ್ರವಲ್ಲದೆ ಹೋರಾಟದ ಹಾದಿಯನ್ನು ತಪ್ಪಿಸಲು ಹಿಂಸೆಗೆ ಪ್ರಚೋದಿಸುವ ದುರುದ್ದೇಶದಿಂದಲೇ ಕೇಂದ್ರ ಸಚಿವರ ಬೆಂಗಾವಲು ವಾಹನ ರೈತರ ಮೇಲೆಯೇ ಹರಿದು ರೈತರನ್ನು ಹತ್ಯೆ ನಡೆಸಿರುವ ಫ್ಯಾಸಿಸ್ಟ್ ಮೋದಿ ಸರಕಾರ ಹಾಗೂ ಗೂಂಡಾರಾಜ್ಯವಾದ ಯೋಗಿ ಸರಕಾರಗಳ ಅಮಾವೀಯ ಕ್ರತ್ಯವನ್ನು ದೇಶದ ಜನತೆ ಒಂದಾಗಿ ಖಂಡಿಸಲೇಬೇಕಾಗಿದೆ* ಎಂದು ಹೇಳಿದರು.
CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡುತ್ತಾ, *ಸ್ವಾತಂತ್ರ್ಯ ಚಳುವಳಿಯ ಬಳಿಕ ದೀರ್ಘಕಾಲದ ಐತಿಹಾಸಿಕ ಹೋರಾಟವಾಗಿ ಹೊರಹೊಮ್ಮಿದ ರೈತರ ಹೋರಾಟವು ದೇಶ ಉಳಿಸುವ ದೇಶಪ್ರೇಮಿ ಹೋರಾಟವಾಗಿ ಪರಿವರ್ತನೆ ಗೊಂಡಿದೆ. ಇಂತಹ ರೈತರ ಹೋರಾಟವನ್ನು ವಿರೋಧಿಸುವ, ಅಪಹಾಸ್ಯ ಮಾಡುವ,ವಿನಾಃ ಕಾರಣ ಅಪಪ್ರಚಾರ ಮಾಡುವವರು ನಿಜಕ್ಕೂ ದೇಶದ್ರೋಹಿಗಳು. ಬದಲಾಗಿ ರೈತ ವಿರೋಧಿಯಾದ ಕ್ರಷಿ ಕಾಯಿದೆಗಳನ್ನು ವಿರೋಧಿಸುವವರು ದೇಶದ್ರೋಹಿಗಳೆಂದು ಜರೆಯುವ ಪ್ರಧಾನಿಗಳ ಹೇಳಿಕೆ ತೀರಾ ಖಂಡನೀಯವಾಗಿದೆ* ಎಂದು ಹೇಳಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ರೈತ ಸಂಘಟನೆಗಳ ಮುಖಂಡರಾದ ಕ್ರಷ್ಣಪ್ಪ ಸಾಲ್ಯಾನ್, ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡೀಸ್, ರೆನ್ನಿ ಡಿಸೋಜ, DYFI ನಾಯಕರಾದ ಸಂತೋಷ್ ಬಜಾಲ್ ಮುಂತಾದವರು ಮಾತನಾಡಿ, *ರೈತರ ಹತ್ಯೆಗೆ ಕಾರಣವಾದ ಕೇಂದ್ರದ ನರೇಂದ್ರ ಮೋದಿ ಸರಕಾರ ಹಾಗೂ ಉತ್ತರ ಪ್ರದೇಶದ ಯೋಗಿ ಸರಕಾರಗಳ ರೈತ ವಿರೋಧಿ ನಡೆಯನ್ನು ಪ್ರಬಲವಾಗಿ* ಖಂಡಿಸಿದರು.
 _ಈ ಹೋರಾಟದಲ್ಲಿ ವಿವಿಧ ರೈತ ಸಂಘಟನೆಗಳ ಮುಖಂಡರಾದ ರಾಮಣ್ಣ ವಿಟ್ಲ, ವಾಸುದೇವ ಉಚ್ಚಿಲ್,ಶೇಖರ್ ಕುತ್ತಾರ್, ಶಾಹುಲ್ ಹಮೀದ್, ಶಬೀರ್ ಅಹಮ್ಮದ್, ಜಾತ್ಯಾತೀತ ಜನತಾದಳದ ಜಿಲ್ಲಾ ನಾಯಕರಾದ ಸುಮತಿ ಎಸ್ ಹೆಗ್ಢೆ,ಅಲ್ತಾಪ್ ತುಂಬೆ, CITU ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರು, DYFI ನಾಯಕರಾದ ನವೀನ್ ಕೊಂಚಾಡಿ, ಜಗದೀಶ್ ಬಜಾಲ್, ನಿತಿನ್ ಬಂಗೇರ, ನಿತಿನ್ ಕುತ್ತಾರ್, ಸಾಮಾಜಿಕ ಚಿಂತಕರಾದ ಪ್ರಮೀಳಾ ದೇವಾಡಿಗ ಮುಂತಾದವರು ಭಾಗವಹಿಸಿದ್ದರು._
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು