News Karnataka Kannada
Friday, May 03 2024
ಉತ್ತರ ಪ್ರದೇಶ

ರೈಲು ಹಳಿಯಲ್ಲಿ ಪಬ್‌ಜಿ ಆಡುತ್ತಿದ್ದ ಇಬ್ಬರು ಬಾಲಕರು ಸಾವು!

Game
Photo Credit :

ಉತ್ತರ ಪ್ರದೇಶ: ರೈಲು ಹಳಿ ಮೇಲೆ ಪಬ್‌ಜಿ ಆಡುತ್ತಿದ್ದ ಇಬ್ಬರು ಬಾಲಕರ ಮೇಲೆ ರೈಲು ಹರಿದು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಮಥುರಾದ ಲಕ್ಷ್ಮೀನಗರದಲ್ಲಿ ಭಾನುವಾರ ನಡೆದಿದೆ.

ಮಥುರಾ ಕಂಟೋನ್ಮೆಂಟ್ ಹಾಗೂ ರಾಯಾ ರೈಲು ನಿಲ್ದಾಣಗಳ ಮಧ್ಯೆ ಈ ಘಟನೆ ಸಂಭವಿಸಿದೆ.

ಕಪಿಲ್ ಹಾಗೂ ರಾಹುಲ್ ರೈಲು ಹಳಿಯ ಮೇಲೆ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ್ದರು. ನಂತರ ಅಲ್ಲಿಯೇ ಕುಳಿತುಕೊಂಡು ಪಬ್‌ಜಿ ಆಡುತ್ತಾ ಮೈ ಮರೆತಿದ್ದರು. ಇದೇ ವೇಳೆ ರೈಲು ಹರಿದು ಮೃತಪಟ್ಟಿದ್ದಾರೆ ಎಂದು ಜಮುನಾ ಫಾರ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕಪಿಲ್‌ (18) ಮತ್ತು ರಾಹುಲ್‌ (16) ಮೃತರು. ಇಬ್ಬರೂ 10ನೇ ತರಗತಿ ವಿದ್ಯಾರ್ಥಿಗಳಾಗಿದ್ದರು. ಘಟನಾ ಸ್ಥಳದಲ್ಲಿ ಎರಡು ಮೊಬೈಲ್‌ಗಳು ಸಿಕ್ಕಿವೆ. ಒಂದು ಹಾನಿಗೊಂಡಿದ್ದರೆ, ಇನ್ನೊಂದರಲ್ಲಿ ಪಬ್‌ಜಿ ಆಟ ಚಾಲೂ ಸ್ಥಿತಿಯಲ್ಲೇ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು