ಸಂಭಾಲ್: ಎರಡು ಬಸ್ ಗಳ ನಡುವೆ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿ, 8 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್ ನ ಆಗ್ರಾ -ಚೌಂದಾಸಿ ಹೈವೇಯಲ್ಲಿ ಸಂಭವಿಸಿದೆ.
ಭಾನುವಾರ ರಾತ್ರಿ ಈ ದುರ್ಘಟನೆ ನಡೆದಿದೆ, ಮದುವೆ ಸಮಾರಂಭದಿಂದ ಜನರನ್ನು ಕರೆದೊಯ್ಯುತ್ತಿದ್ದ ಬಸ್ ಚಕ್ರ ಪಂಕ್ಚರ್ ಆಗಿ ರಸ್ತೆ ಬದಿ ನಿಂತಿತ್ತು. ಈ ವೇಳೆ ಬಂದ ಮತ್ತೊಂದು ಬಸ್ ಡಿಕ್ಕಿ ಹೊಡೆದಿದೆ.
ವೃಪಾಲ್, ಹ್ಯಾಪಿ, ಛೋಟೆ, ರಾಕೇಶ್, ಅಭಯ್ ಮತ್ತು ವಿನೀತ್ ಹಾಗೂ ಭೂರೇ ಮೃತರು, ಇವರೆಲ್ಲಾ ಮದುವೆ ಕಾರ್ಯಕ್ರಮ ಮುಗಿಸಿ ವಾಪಸ್ ಬರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡ 8 ಮಂದಿಯನ್ನು ಸಮೀಪದ ಆಸ್ಪತ್ಪೆಗೆ ದಾಖಲಿಸಿದ್ದು. ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.