ಉತ್ತರ ಪ್ರದೇಶದ ಮಥುರಾದಲ್ಲಿನ ಲಕ್ಷಿನಗರ ನಿವಾಸಿಗಳಾಗಿರುವ 10ನೇ ತರಗತಿ ವಿದ್ಯಾರ್ಥಿಗಳಾದ 18 ವರ್ಷದ ಕಪಿಲ್ ಹಾಗೂ 16 ವರ್ಷ ರಾಹುಲ್ ಇಬ್ಬರು ವಾಕಿಂಗ್ ಮಾಡುತ್ತಿದ್ದ ವೇಳೆ ಪಬ್ಜಿ ಆಟದಲ್ಲಿ ಮುಳುಗಿದ್ದಾರೆ.
ವಾಕಿಂಗ್ ದಾರಿ ತಪ್ಪಿದೆ. ಗಮನ ಪಬ್ಜಿ ಮೇಲೆ ಹೆಚ್ಚಾಗಿತ್ತು. ಪರಿಣಾಮ ಇಬ್ಬರು ವಿದ್ಯಾರ್ಥಿಗಳ ಮೇಲೆ ರೈಲು ಹರಿದು ಸ್ಥಳದಲ್ಲೇ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ನಿನ್ನೆ ಭಾನುವಾರ ಶಾಲೆಗೆ ರಜೆ ಇದ್ದ ಕಾರಣ ಬೆಳಗ್ಗೆಯಿಂದಲೇ ಆಟ ಆಡಲು ಶುರು ಮಾಡಿಕೊಂಡಿದ್ದರೆ.
ವಾಕಿಂಗ್ ವೇಳೆ ಪಬ್ಜಿ ಗೇಮ್ ಆಡುತ್ತಾ ಮುಂದೆ ಸಾಗಿದ್ದಾರೆ. ಈ ಇಬ್ಬರು ವಿದ್ಯಾರ್ಥಿಗಳು ದಿನವಿಡಿ ಪಬ್ಜಿ ಆಡುತ್ತಿರಲಿಲ್ಲ. ಓದುವುದರಲ್ಲೂ ಮುಂದಿದ್ದರು. ಬಿಡುವು ಸಿಕ್ಕಾಗ ಮಾತ್ರ ಪಬ್ಜಿ ಆಡುತ್ತಿದ್ದರಂತೆ. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಇಬ್ಬರ ಪ್ರಾಣಪಕ್ಷಿ ಹಾರಿಹೋಗಿದೆ.