News Karnataka Kannada
Thursday, April 18 2024
Cricket
ಮಂಗಳೂರು

ಬಂಟ್ವಾಳ: ಭಾರೀ ಮಳೆಗೆ ಕೆಂಪುಗುಡ್ಡೆಯ ಗುಡ್ಡಪ್ರದೇಶ ಬಿರುಕು, ಗ್ರಾಮಸ್ಥರಿಗೆ ಆತಂಕ

Bantwal: Due to heavy rains, the hilly area of Redgudda has cracked, causing concern to the villagers.
Photo Credit : News Kannada

ಬಂಟ್ವಾಳ: ಕಳೆದ ವಾರ ಸುರಿದ ಭಾರೀ ಮಳೆಗೆ ಲೋಕಪಯೋಗಿ ಇಲಾಖೆಗೆ ಸಂಬಂಧಿಸಿದ ರಸ್ತೆಗೆ ಗುಡ್ಡ ಜರಿದು ಹಾನಿಯಾಗುವ ಸಂಭವವಿದೆ. ರಸ್ತೆಯ ಬದಿಯಲ್ಲೇ ಇರುವ ಕೆಂಪುಗುಡ್ಡೆಯ ಗುಡ್ಡಪ್ರದೇಶ ಬಿರುಕು ಬಿಟ್ಟಿದ್ದು, ರಸ್ತೆಯಿಂದ ಕೆಳಗೆ ಇಳಿಜಾರು ಪ್ರದೇಶದಲ್ಲಿ ವಾಸ್ತವ್ಯ ಇರುವ ಮನೆಗಳು, ಕೃಷಿಭೂಮಿ ಅಪಾಯದಲ್ಲಿದೆ.

ರಸ್ತೆ ಬದಿಯಲ್ಲಿ ಉದ್ದಕ್ಕೆ ಸುಮಾರು ೫೦೦ ಮೀಟರ್ ಉದ್ದದಲ್ಲಿ ಗುಡ್ಡ ಬಿರುಕು ಬಿಟ್ಟಿದೆ. ಅಷ್ಟು ಮಾತ್ರವಲ್ಲೇ ಗುಡ್ಡದ ನೇರ ಭಾಗದಲ್ಲೂ ಗುಡ್ಡ ಇಬ್ಬಾಗವಾಗಿರುವುದು ಕಾಣಿಸಿದೆ.

ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಜಗದಂಬಿಕಾ ಭಜನಾ ಮಂದಿರದ ಸಮೀಪದ ಗುಡ್ಡ ಬಿರುಕು ಕಂಡು ಬಂದಿದ್ದು, ಈ ಭಾಗದಲ್ಲಿ ಸಂಚರಿಸುವ ಗ್ರಾಮಸ್ಥರು ಆತಂಕಕ್ಕೊಳಪಟ್ಟಿದ್ದಾರೆ. ಕೆಲವು ವರ್ಷಗಳ ಹಿಂದೆ ಗುಡ್ಡವನ್ನು ಸಮತಟ್ಟು ಮಾಡಿದ ಪರಿಣಾಮ ಗುಡ್ಡದ ಮತ್ತೊಂದು ಬದಿಯಲ್ಲಿ ಗುಡ್ಡ ಬಿರುಕು ಬಿಟ್ಟಿದೆ. ಗುಡ್ಡೆ ಬಿರುಕು ಕಂಡು ಬಂದಂತೆ ಅಮ್ಟಾಡಿ ಪಂಚಾಯತ್‌ನಿಂದ ಸಾರ್ವಜನಿಕರಿಗೆ ತಿಳಿಯಪಡಿಸಲು ರಸ್ತೆ ಇರುವ ಎರಡು ಬದಿಯಲ್ಲೂ ಸೂಚನಾ ಫಲಕವನ್ನೂ ಹಾಕಿದ್ದಾರೆ.

ಅಜೆಕಲ-ಕೆಂಪುಗುಡ್ಡೆ-ಕಲ್ಪನೆ ರಸ್ತೆ ಕಾಮಗಾರಿಗೆ ಕೇಂದ್ರೀಯ ರಸ್ತೆ ನಿಧಿ ಯೋಜನೆಯಡಿ ೨೦೧೩ರಲ್ಲಿ ಸುಮಾರು ೪ ಕೋಟಿ ಅನುದಾನದ ಮೂಲಕ ಅಭಿವೃದ್ಧಿ ಮಾಡಲಾಗಿತ್ತು. ಬಂಟ್ವಾಳ ಉಪವಿಭಾಗದ ಲೋಕೋಪಯೋಗಿ ಇಲಾಖೆಗೆ ಸೇರಿದ ಸುಸಜ್ಜಿತ ರಸ್ತೆಗೆ ಗುಡ್ಡದಿಂದ ನೀರು ನಿರಂತರವಾಗಿ ಇಳಿದು ಬರುವುದರಿಂದ ರಸ್ತೆಯೂ ಹಾಳಾಗಿರುತ್ತದೆ. ಅತ್ಯಂತ ಉಪಯೋಗವಾಗುವ ರಸ್ತೆ ಇದಾಗಿದ್ದು ಸಂಪರ್ಕದ ಕೊಂಡಿಯಾಗಿದೆ.

ಈ ಭಾಗದಿಂದ ಕಲ್ಪನೆಗೆ ಕೇವಲ ೮ ಕಿ.ಮೀ. ದೂರ ಇರುವುದು. ಇಲ್ಲಿಂದ ಬೆಂಜನಪದವು ಮಾರ್ಗವಾಗಿ ನೀರುಮಾರ್ಗ-ಮಂಗಳೂರು, ಫರಂಗಿಪೇಟೆ-ಮಂಗಳೂರು ತಲುಪಬಹುದು. ಅದೇ ರೀತಿ ಪುಣ್ಯ ಕ್ಷೇತ್ರಗಳಾದ ಕಲ್ಪನೆ-ಪೊಳಲಿ, ಕಟೀಲು ಹಾಗೂ ಬಜಪೆ ವಿಮಾನ ನಿಲ್ದಾಣವನ್ನೂ ತಲುಪಬಹುದು. ಬಂಟ್ವಾಳ ಹಾಗೂ ಸುತ್ತಲಿನ ಗ್ರಾಮೀಣ ಪ್ರದೇಶದ ಜನರಿಗೆ ಬಿ.ಸಿ.ರೋಡು ಹೋಗುವ ಬದಲು ಈ ಮಾರ್ಗವಾಗಿ ಮೇಲಿನ ಸ್ಥಳಗಳನ್ನು ತಲುಪುವುದು ಸುಲಭ ಸಾಧ್ಯವಾಗಿದೆ.

ಅಮ್ಟಾಡಿ ಗ್ರಾಮದ ಈ ರಸ್ತೆ ಗ್ರಾಮೀಣ ಭಾಗದಲ್ಲಿ ಮುಖ್ಯ ರಸ್ತೆಯಾಗಿರುತ್ತದೆ. ಈ ರಸ್ತೆಯಲ್ಲಿ ಯಾವುದೇ ಬಸ್ಸಿನ ವ್ಯವಸ್ಥೆ ಇಲ್ಲದಿದ್ದರೂ ಅಟೋ ರಿಕ್ಷಾದ ಮೂಲಕ ಪ್ರಯಾಣ ಮಾಡುತ್ತಾರೆ. ಖಾಸಗಿ ಸ್ಥಳವಾದರೂ ಹಚ್ಚ ಹಸುರಾಗಿರುವ ಕೆಂಪುಗುಡ್ಡ ಪ್ರದೇಶವನ್ನು ಉಳಿಸಿಕೊಳ್ಳುವುದು ಜನರ ಕರ್ತವ್ಯ. ಗುಡ್ಡದ ಮೇಲೆ ಮಣ್ಣು ಅಗೆತ, ಗುಡ್ಡ ಒಂದು ಬದಿಯಿಂದ ಕುಸಿಯಲು ಪ್ರಾರಂಭವಾದರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮಳೆ ಕೇವಲ ನಾಲ್ಕು ದಿನ ಬಂದಿರುವುದು. ಜೋರು ಮಳೆ ಇನ್ನು ಬರಬೇಕಷ್ಟೆ. ಮಳೆಯು ಎಡೆಬಿಡದೆ ಸುರಿಯಲು ಆರಂಭವಾದರೆ ಮಾತ್ರ ಅಪಾಯ ಕಟ್ಟಿಟ್ಟ ಬುತ್ತಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು