ನವದೆಹಲಿ: ಭಾರತದ ಮೊದಲ ಹಳ್ಳಿ ಎಂದು ಗುರುತಿಸಲಾಗಿರುವ ಕೌರಿಕ್ ಮತ್ತು ಗುಯೆಗೆ ದೂರಸಂಪರ್ಕ ಜಾಲ (ಟೆಲಿಕಾಂ ಸಂಪರ್ಕ) ಕಲ್ಪಿಸಲಾಗಿದೆ. ಹಿಮಾಚಲ ಪ್ರದೇಶದ ಲಾಹೋಲ್ ಮತ್ತು ಸ್ಪಿತಿ ಜಿಲ್ಲೆಯ ಈ ಹಳ್ಳಿಗಳು ಸಮುದ್ರ ಮಟ್ಟದಿಂದ ಸುಮಾರು 14,931 ಅಡಿ ಎತ್ತರದಲ್ಲಿವೆ.
ಹೌದು. . ಟೆಲಿಕಾಂ ಸಂಪರ್ಕ ಸಿಕ್ಕಿರುವ ಸಂಗತಿಯನ್ನು ಕೇಂದ್ರ ದೂರಸಂಪರ್ಕ ಇಲಾಖೆ ‘ಎಕ್ಸ್’ ಪೋಸ್ಟ್ನಲ್ಲಿ ತಿಳಿಸಿದೆ. ಕೌರಿಕ್ ಹಳ್ಳಿಯು ಟಿಬೆಟ್ ಗಡಿಗೆ ಹತ್ತಿರದಲ್ಲಿದೆ. ಸ್ಪಿತಿ ನದಿ ಸಂಗಮವಾಗುವ ಮೊದಲು ಪರಂಗ್ ಅಥವಾ ಪರೆ ಚು ನದಿಯ ಕಣಿವೆಯಲ್ಲಿ ಈ ಹಳ್ಳಿ ಇದೆ. ಗುಯೆ ಸ್ಪಿತಿ ನದಿ ಕಣಿವೆಯಲ್ಲಿರುವ ಒಂದು ಹಳ್ಳಿಯಾಗಿದೆ. ಇದು ಭಾರತ-ಚೀನಾ ಗಡಿಯಿಂದ ಕೆಲವು ಕಿಲೋ ಮೀಟರ್ ದೂರದಲ್ಲಿದೆ.
Telecom connectivity reaches 14,931 Ft above sea level at India’s first village, Kaurik and Guea, in Lahaul & Spiti District, HP.
🛜 Connecting the unconnected. pic.twitter.com/tD3CwsAUj9
— DoT India (@DoT_India) April 16, 2024