ತೆಲಂಗಾಣ: ತೆಲಂಗಾಣದಲ್ಲಿ ಭಾರೀ ಮಳೆಗೆ ಮನೆಯ ಗೋಡೆ ಕುಸಿದು ಮಹಿಳೆ ಮತ್ತು ಆಕೆಯ ಮಗಳು ಸಾವನ್ನಪ್ಪಿರುವ ಘಟನೆ ನಲ್ಗೊಂಡದಲ್ಲಿ ನಡೆದಿದೆ.
ಮೃತರನ್ನು ಪದ್ಮನಗರದ ನಡಿಕುಡಿ ಲಕ್ಷ್ಮಿ ಮತ್ತು ಅವರ ಮಗಳು ಕಲ್ಯಾಣಿ ಎಂದು ಗುರುತಿಸಲಾಗಿದ್ದು, ಮನೆಯಲ್ಲಿ ಮಲಗಿದ್ದಾಗ ಶುಕ್ರವಾರ ಮುಂಜಾನೆ ಈ ಘಟನೆ ಸಂಭವಿಸಿದೆ.
ರಾಜ್ಯದ 14 ಜಿಲ್ಲೆಗಳಲ್ಲಿಇಂದು ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿದ್ದು, ರಾಜ್ಯಕ್ಕೆ ರೆಡ್ ಅಲರ್ಟ್ ಘೋಷಿಸಿದೆ.