ಹೈದರಾಬಾದ್: ತೆಲುಗು ದೇಶಂ ಪಕ್ಷ (ಟಿಡಿಪಿ)ದ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶದ ಮಾಜಿ ಸಿಎಂ ಎನ್. ಚಂದ್ರಬಾಬು ನಾಯ್ಡು ಅವರು ಸೆರೆವಾಸದಲ್ಲಿದ್ದಾರೆ. ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿದ ಹಿನ್ನೆಲೆಯಲ್ಲಿ ಆಂಧ್ರದ ಪ್ರವಾಸೋದ್ಯಮ ಸಚಿವೆ ಹಾಗೂ ನಟಿ ರೋಜಾ ಅವರು ತಮ್ಮ ನಿವಾಸದಲ್ಲಿ ಪಕ್ಷದ ಬೆಂಬಲಿಗರೊಂದಿಗೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ.
ಅಷ್ಟೇ ಅಲ್ಲ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಬೆಂಬಲಿಗರೊಂದಿಗೆ ನಾಯ್ಡು ವಿರುದ್ಧ ಘೋಷಣೆ ಕೂಗಿ ಸಿಹಿ ಹಂಚಿದ್ದಾರೆ. ಜೈ ಜಗನ್.. ಜೈ ಜಗನ್ ಎನ್ನುತ್ತಾ ಪಟಾಕಿ ಸಿಡಿಸಿ ಹಬ್ಬವನ್ನೇ ಆಚರಿಸಲಾಗಿದೆ.
ಇನ್ನು ಚಂದ್ರಬಾಬು ನಾಯ್ಡುರನ್ನು ವಿಜಯವಾಡದ 3ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಸದ್ಯ ಅವರನ್ನು ರಾಜಮಂಡ್ರಿ ಜೈಲಿನಲ್ಲಿಡಲಾಗಿದೆ.
తనజోలికి ఇన్నాళ్లూ ఏ వ్యవస్థా రాలేదని విర్రవీగిన @ncbn కు ఈ కోర్ట్ తీర్పు తగిన గుణపాఠం. ఎవరూ న్యాయానికి, కోర్టులకు అతీతం కాదని సమాజానికి తెలియాలి. చంద్రబాబు చేసిన పాపానికి తగిన ఫలితం అనుభవించాలి.#CorruptBabuNaidu#SkilledCriminalCBNInJail pic.twitter.com/q7g8aeUDuy
— Roja Selvamani (@RojaSelvamaniRK) September 10, 2023