News Karnataka Kannada
Monday, April 29 2024
ತೆಲಂಗಾಣ

ತೆಲಂಗಾಣದ ಡ್ಯಾಂ ವಶಕ್ಕೆ ಪಡೆದು ನೀರು ಬಿಡುಗಡೆ ಮಾಡಿದ ಆಂಧ್ರ ಪೊಲೀಸರು

Andhra Pradesh police seizes dam
Photo Credit : News Kannada

ಹೈದರಾಬಾದ್‌: ತಮಿಳುನಾಡು ದಿನಂಪ್ರತಿ ಎಂಬಂತೆ ಕಾವೇರಿ ನೀರಿಗಾಗಿ ಖ್ಯಾತೆ ತೆಗೆಯುವುದು ಎಲ್ಲರಿಗೂ ತಿಳಿದಿದೆ.

ಈ ಜಲವಿವಾದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಅದೇ ರೀತಿ ತೆಲಂಗಾಣ ಮತ್ತು ಆಂಧ್ರಪ್ರದೇಶ ಮಧ್ಯೆ ಜಲವಿವಾದವೊಂದು ಭುಗಿಲೆದ್ದಿದೆ. ತೆಲಂಗಾಣದ ಅಧೀನದಲ್ಲಿರುವ ನಾಗಾರ್ಜುನ ಅಣೆಯಕಟ್ಟೆಯನ್ನು ವಶಪಡಿಸಿಕೊಂಡು ಆಂಧ್ರ ಪ್ರದೇಶ ಪೊಲೀಸರು ಸುಮಾರು 10 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ ಮಾಡಿದ ಘಟನೆ ಗುರುವಾರ ಮಧ್ಯರಾತ್ರಿ ನಡೆದಿದೆ.

ತೆಲಂಗಾಣದಲ್ಲಿ ಚುನಾವಣೆ ನಡೆದ ದಿನ ಮಧ್ಯರಾತ್ರಿ ಸುಮಾರು 1 ಗಂಟೆಗೆ 400 ಮಂದಿ ಆಂಧ್ರಪ್ರದೇಶ ಪೊಲೀಸರು ನಾಗಾರ್ಜುನ ಸಾಗರ ಅಣೆಕಟ್ಟನ್ನು ತಲುಪಿ ಅದನ್ನು ಸಂಪೂರ್ಣವಾಗಿ ವಶಪಡಿಸಿಕೊಂಡು ನೀರು ಬಿಡುಗಡೆ ಮಾಡಿದ್ದಾರೆ. ಈ ವೇಳೆ ಉಭಯ ರಾಜ್ಯಗಳ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದರೂ ಸಹ ನೀರು ಬಿಡುವಲ್ಲಿ ಆಂಧ್ರ ಪೊಲೀಸರು ಯಶಸ್ವಿಯಾಗಿದ್ದಾರೆ.

ನಾಗಾರ್ಜುನ ಸಾಗರ ಅಣೆಕಟ್ಟಿಗೆ ನಿರ್ಮಿಸಲಾಗಿರುವ ಬಲನಾಲೆಯ ಮೂಲಕ 10 ಸಾವಿರ ಕ್ಯುಸೆಕ್‌ನಷ್ಟು ನೀರನ್ನು ಬಿಡುಗಡೆ ಮಾಡಲಾಗಿದೆ. ಈ ಘಟನೆಯ ಬಳಿಕ ಎಚ್ಚೆತ್ತುಕೊಂಡಿರುವ ತೆಲಂಗಾಣ ಸರ್ಕಾರ ಅಣೆಕಟ್ಟಿನ ಬಳಿ ಪೊಲೀಸ್‌ ಭದ್ರತೆಯನ್ನು ಹೆಚ್ಚು ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು