News Karnataka Kannada
Monday, April 29 2024
ಅಂಕಣ

ಡಾರ್ಕ್ ಸರ್ಕಲ್ ಸಮಸ್ಯೆಯಿಂದ ಪಾರಾಗಲು ಇಲ್ಲಿದೆ ಸರಳ ಪರಿಹಾರ

Here's a simple solution to get rid of the dark circle problem
Photo Credit :

ಕೆಲವರಿಗೆ ಡಾರ್ಕ್ ಸರ್ಕಲ್ (ಕಪ್ಪು ವರ್ತುಲ) ಸಮಸ್ಯೆ ಭಾರೀ ಕಾಡುತ್ತಿರುತ್ತದೆ. ಇದು ಸೌಂದರ್ಯವನ್ನು ಹಾಳು ಮಾಡುತ್ತದೆ. ಈ ಡಾರ್ಕ್ ಸರ್ಕಲ್ ಸಮಸ್ಯೆ ನಿದ್ದೆ ಕಡಿಮೆ ಆದಾಗ, ತಡ ರಾತ್ರಿ ವರೆಗೆ ಮೊಬೈಲ್ ಫೋನ್ ಉಪಯೋಗಿಸುವುದರಿಂದ, ಇನ್ನೂ ಕೆಲವರಿಗೆ ಜೀನ್ಸ್ ಇಂದ ಬರುತ್ತದೆ. ಇದರ ನಿವಾರಣೆಗೆ ಕೆಲವೊಂದು ವಿಧಾನಗಳು ಇಲ್ಲಿದೆ.

ಸೌತೆಕಾಯಿಯನ್ನು ಸ್ಲೈಸ್ ಆಗಿ ಕತ್ತರಿಸಿ ಅದನ್ನು ಸ್ವಲ್ಪ ಹೊತ್ತು ಫ್ರಿಡ್ಜ್ ನಲ್ಲಿ ಇಟ್ಟು. ನಂತರ ಅದನ್ನು ಕಣ್ಣಿನ ಮೇಲೆ ಇಡಿ. ಹೀಗೆ ಕ್ರಮೇಣ ಮಾಡಿದರೆ ಉತ್ತಮ ರಿಸಲ್ಟ್ ಪಡೆಯಬಹುದು.

ಗುಲಾಬಿ ನೀರು (ರೋಸ್ ವಾಟರ್) ಅನ್ನು ಒಂದು ಹತ್ತಿಯಲ್ಲಿ ಅದ್ದಿ, ಕಣ್ಣಿನ ರೆಪ್ಪೆಯ ಮೇಲೆ ಇಡುವುದರಿಂದ ಕಣ್ಣುಗಳ ಕೆಳಗೆ ಇರುವ ಕಪ್ಪು ಬಣ್ಣ ಹಂತ-ಹಂತವಾಗಿ ಸರಿಯಾಗುತ್ತದೆ.

ಆಲೂಗಡ್ಡೆಯನ್ನು ನೀರಿನಲ್ಲಿ ತೊಳೆದು. ನಂತರ ಸಣ್ಣದಾಗಿ ತುರಿದುಕೊಂಡು ರಸವನ್ನು ತೆಗೆದು, ಆ ರಸವನ್ನು ಹತ್ತಿಯ ಸಹಾಯದಿಂದ ರಸವನ್ನು ಹೀರಿಕೊಂಡು ಕಣ್ಣುಗಳ ಮೇಲೆ ಸ್ವಲ್ಪ ಸಮಯ ಇಟ್ಟು ಅನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.

ಅಲೋವೆರಾ ಜೆಲ್ ತೆಗೆದುಕೊಂಡು ಅದನ್ನು ಡಾರ್ಕ್ ಸರ್ಕಲ್ ಗೆ ಹಚ್ಚಿ ಮಸಾಜ್ ಮಾಡಿ. ರಾತ್ರಿಯಿಡೀ ಹಾಗೇ ಬಿಟ್ಟು ಬೆಳಗ್ಗೆ ತೊಳೆಯಿರಿ. ಹೀಗೆ ಕ್ರಮೇಣ ಮಾಡಿ ಉತ್ತಮ ರಿಸಲ್ಟ್ ಪಡೆಯಬಹುದು .

ಟೊಮೆಟೊ ಮತ್ತು ನಿಂಬೆ ರಸವನ್ನು ಬೆರೆಸಿ ಪೇಸ್ಟ್ ಮಾಡಿ. ಇದನ್ನು ಕಣ್ಣುಗಳ ಸುತ್ತಲೂ ಹಚ್ಚಿ ಸ್ವಲ್ಪ ಸಮಯ ಹಾಗೆ ಬಿಟ್ಟು ನಂತರ ಚೆನ್ನಾಗಿ ತೊಳೆಯಿರಿ. ಹೀಗೆ ಎರಡು ದಿನಕ್ಕೆ ಒಂದು ಬಾರಿ ಮಾಡಿ ನಂತರ ನೀವೆ ಬದಲಾವಣೆಯನ್ನು ಕಾಣಬಹುದು.

ಮೊಸರಿಗೆ ನಿಂಬೆ ರಸವನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ, ಈ ಪೇಸ್ಟ್ ಅನ್ನು ಡಾರ್ಕ್ ಸರ್ಕಲ್ ಆದ ಜಾಗಕ್ಕೆ ಹಚ್ಚಿ ಸ್ವಲ್ಪ ಸಮಯ ಹಾಗೆ ಬಿಡಿ ನಂತರ ಚೆನ್ನಾಗಿ ಸ್ವಚ್ಛ ಮಾಡಿ. ಹೀಗೆ ಕ್ರಮೇಣ ಮಾಡಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು