News Karnataka Kannada
Sunday, April 28 2024
ತಮಿಳುನಾಡು

ಮಹಿಳೆಯರು ನಡೆಸುತ್ತಿರುವ ಚಾಕೋಲೆಟ್‌ ಫ್ಯಾಕ್ಟರಿಗೆ ರಾಹುಲ್‌ ಗಾಂಧಿ ಭೇಟಿ

Rahul Gandhi
Photo Credit : News Kannada

ಊಟಿ: ತಮಿಳುನಾಡಿನಲ್ಲಿ ಸುಮಾರು 70 ಮಹಿಳೆಯರು ನಡೆಸುತ್ತಿರುವ ಮಾಡೀಸ್‌ ಚಾಕೋಲೆಟ್‌ ಫ್ಯಾಕ್ಟರಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿ ನೀಡಿದ್ದು, ಚಾಕೋಲೆಟ್‌ ಮಾಡುವ ವಿಧಾನವನ್ನು ಕಲಿತುಕೊಂಡಿದ್ದಾರೆ.

ತಮಿಳುನಾಡಿನ ಜನಪ್ರಿಯ ಚಾಕೋಲೆಟ್‌ ಬ್ರಾಂಡ್‌ ‘ಮಾಡೀಸ್‌’ ಚಾಕೋಲೆಟ್‌ ಅನ್ನು ಹೇಗೆ ತಯಾರಿಸಲಾಗುತ್ತದೆ ಎಂಬುವುದರ ಬಗ್ಗೆ ರಾಹುಲ್‌ ಗಾಂಧಿ ವಿವರವಾದ ಮಾಹಿತಿ ಪಡೆದಿದ್ದಾರೆ.

ಜೊತೆಯಲ್ಲಿ ತಮಿಳು ಭಾಷೆ ಕಲಿಯಲು ಪ್ರಯತ್ನಿಸಿದ್ದಾರೆ.

ಸಾಮಾಜಿಕ ಮಾಧ್ಯಮ ‘ಎಕ್ಸ್‌’ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ರಾಹುಲ್‌ ಗಾಂಧಿ, ಮಹಿಳೆಯರೆಲ್ಲ ಸೇರಿ ಉದ್ಯಮವೊಂದನ್ನು ನಡೆಸುತ್ತಿರುವುದರ ಬಗ್ಗೆ ಪ‍್ರಶಂಸೆ ವ್ಯಕ್ತಪಡಿಸಿದ್ದಾರೆ.

’70 ಮಹಿಳೆಯರು ಒಟ್ಟಾಗಿ ಊಟಿಯ ಪ್ರಸಿದ್ಧ ಚಾಕೋಲೆಟ್‌ ಫ್ಯಾಕ್ಟರಿಯೊಂದನ್ನು ನಡೆಸಿಕೊಂಡು ಬರುತ್ತಿದ್ದಾರೆ! ಮಾಡೀಸ್‌ ಚಾಕೋಲೆಟ್‌ ನಡೆದು ಬಂದ ಹಾದಿ ಇತರ ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ನಡೆಸುತ್ತಿವವರಿಗೆ ಸ್ಪೂರ್ತಿಯಾಗಲಿದೆ’ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು