News Karnataka Kannada
Wednesday, May 01 2024
ತಮಿಳುನಾಡು

‘ಮಂಜ್ಞುಮ್ಮೆಲ್ ಬಾಯ್ಸ್’ ತಂಡವನ್ನು ಮನೆಗೆ ಆಹ್ವಾನಿಸಿ ಸತ್ಕರಿಸಿದ ಸೂಪರ್‌ ಸ್ಟಾರ್

ಮಲಯಾಳಂ‌ ಚಿತ್ರರಂಗದಲ್ಲಿ ‘ಮಂಜ್ಞುಮ್ಮೆಲ್ ಬಾಯ್ಸ್’ ಸಿನಿಮಾ ಹೊಸ ದಾಖಲೆಗಳನ್ನು ಬರೆದಿದೆ. ಮಲಯಾಳಂ ಚಿತ್ರರಂಗದ ಈ ವರೆಗಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನಿಸಿಕೊಂಡಿದೆ ‘ಮಂಜ್ಞುಮ್ಮೆಲ್ ಬಾಯ್ಸ್’. ಸಿನಿಮಾವನ್ನು ಎಲ್ಲ ವರ್ಗದ ಪ್ರೇಕ್ಷಕರು ಸಹ ನೋಡಿ ಮೆಚ್ಚಿದ್ದಾರೆ. ಸಾಮಾನ್ಯ ಪ್ರೇಕ್ಷಕರು ಮಾತ್ರವೇ ಅಲ್ಲದೆ ಸಿನಿಮಾ ಸೆಲೆಬ್ರಿಟಿಗಳು, ಸ್ಟಾರ್ ನಟರು ಸಹ ನೋಡಿ ಮೆಚ್ಚಿ ಚಿತ್ರತಂಡದ ಪ್ರತಿಭೆಯನ್ನು, ಶ್ರಮವನ್ನು ಕೊಂಡಾಡಿದ್ದಾರೆ. ಇದೀಗ ನಟ ರಜನೀಕಾಂತ್ ಸಹ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದು ಚಿತ್ರತಂಡವನ್ನು ಮನೆಗೆ ಆಹ್ವಾನಿಸಿ ಸತ್ಕರಿಸಿದ್ದಾರೆ.
Photo Credit : NewsKarnataka

ಚೆನ್ನೈ:  ಮಲಯಾಳಂ‌ ಚಿತ್ರರಂಗದಲ್ಲಿ ‘ಮಂಜ್ಞುಮ್ಮೆಲ್ ಬಾಯ್ಸ್’ ಸಿನಿಮಾ ಹೊಸ ದಾಖಲೆಗಳನ್ನು ಬರೆದಿದೆ. ಮಲಯಾಳಂ ಚಿತ್ರರಂಗದ ಈ ವರೆಗಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನಿಸಿಕೊಂಡಿದೆ ‘ಮಂಜ್ಞುಮ್ಮೆಲ್ ಬಾಯ್ಸ್’. ಸಿನಿಮಾವನ್ನು ಎಲ್ಲ ವರ್ಗದ ಪ್ರೇಕ್ಷಕರು ಸಹ ನೋಡಿ ಮೆಚ್ಚಿದ್ದಾರೆ. ಸಾಮಾನ್ಯ ಪ್ರೇಕ್ಷಕರು ಮಾತ್ರವೇ ಅಲ್ಲದೆ ಸಿನಿಮಾ ಸೆಲೆಬ್ರಿಟಿಗಳು, ಸ್ಟಾರ್ ನಟರು ಸಹ ನೋಡಿ ಮೆಚ್ಚಿ ಚಿತ್ರತಂಡದ ಪ್ರತಿಭೆಯನ್ನು, ಶ್ರಮವನ್ನು ಕೊಂಡಾಡಿದ್ದಾರೆ. ಇದೀಗ ನಟ ರಜನೀಕಾಂತ್ ಸಹ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದು ಚಿತ್ರತಂಡವನ್ನು ಮನೆಗೆ ಆಹ್ವಾನಿಸಿ ಸತ್ಕರಿಸಿದ್ದಾರೆ.

ತಮಗೆ ಸಿನಿಮಾ ಇಷ್ಟವಾದರೆ ಸಿನಿಮಾದ ನಿರ್ದೇಶಕರು, ನಟರನ್ನು ಕರೆಸಿ ಸತ್ಕರಿಸುವುದು ರಜನೀಕಾಂತ್ ಅಭ್ಯಾಸ. ಈ ಹಿಂದೆ ಕನ್ನಡದ ‘ಕಾಂತಾರ’ ಸಿನಿಮಾವನ್ನು ಮೆಚ್ಚಿಕೊಂಡಿದ್ದ ರಜನೀಕಾಂತ್, ರಿಷಬ್ ಶೆಟ್ಟಿಯವರನ್ನು ಕರೆಸಿ ಅವರನ್ನು ಸತ್ಕರಿಸಿದ್ದರಲ್ಲದೆ, ಅವರಿಗೆ ಚಿನ್ನದ ಚೈನ್ ಒಂದನ್ನು ಉಡುಗೊರೆಯಾಗಿ ನೀಡಿದ್ದರು. ಇದೀಗ ‘ಮಂಜ್ಞುಮ್ಮೆಲ್ ಬಾಯ್ಸ್’ ಸಿನಿಮಾ ನೋಡಿ ಮೆಚ್ಚಿಕೊಂಡಿರುವ ರಜನೀಕಾಂತ್, ನಿರ್ದೇಶಕ ಚಿದಂಬರಂ ಸೇರಿದಂತೆ ಸಿನಿಮಾದ ಪ್ರಮುಖ ನಟರು, ತಂತ್ರಜ್ಞರನ್ನು ಮನೆಗೆ ಆಹ್ವಾನಿಸಿ ಅವರನ್ನು ಸತ್ಕರಿಸಿದ್ದಾರೆ.

ನಿರ್ದೇಶಕ ಚಿದಂಬರಂ ಹಾಗೂ ಚಿತ್ರತಂಡದೊಟ್ಟಿಗೆ ರಜನೀಕಾಂತ್ ಸಂವಾದ ನಡೆಸುತ್ತಿರುವ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ರಜನೀಕಾಂತ್ ಮಾತ್ರವೇ ಅಲ್ಲದೆ ತಮಿಳಿನ ನಟ ಧನುಶ್​ಗೆ ಸಹ ‘ಮಂಜ್ಞುಮ್ಮೆಲ್ ಬಾಯ್ಸ್’ ಸಿನಿಮಾ ಬಹಳ ಇಷ್ಟವಾಗಿ, ನಿರ್ದೇಶಕರನ್ನು ಕರೆಸಿ ಅಭಿನಂದಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು