ಚೆನ್ನೈ,: ನೀಲ್ಗಿರಿ ಜಿಲ್ಲೆಯಲ್ಲಿ ಘಟನೆ ಸಂಭವಿಸಿದೆ. ವಿಮಾನದಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 14 ಮಂದಿ ಪ್ರಯಾಣಿಸುತ್ತಿದ್ದ . ಸೇನಾ ಹೆಲಿಕಾಪ್ಟರ್ ತಮಿಳುನಾಡಿನಲ್ಲಿ ಪತನವಾಗಿರುವ ಮಾಹಿತಿ ತಿಳಿದುಬಂದಿದೆ.
ಊಟಿಯಲ್ಲಿ ನಿಗದಿಯಾಗಿದ್ದ ಸಮಾರಂಭಕ್ಕೆ ತೆರಳುತ್ತಿದ್ದರು. ಬಿಪಿನ್ ರಾವತ್ ಪತ್ನಿ ಹಾಗೂ ಬ್ರಿಗೆಡಿಯರ್ ರಾಂಕ್ನ ಅಧಿಕಾರಿಗಳಿದ್ದರು.
ಮೂವರನ್ನು ವೆಲ್ಲಿಂಗ್ಟನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರಿಗಾಗಿ ಶೋಧಕಾರ್ಯ ನಡೆಯುತ್ತಿದೆ. ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಘಟನೆ ನಡೆದಿದೆ. ನಾಲ್ಕು ಮಂದಿ ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಎಂಐ ಸೀರೀಸ್ನ ಹೆಲಿಕಾಪ್ಟರ್ ಇದಾಗಿತ್ತು.
ಸೇನೆ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯ ಮುಂದುವರೆಸಿದ್ದಾರೆ, ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಕುರಿತು ಯಾವುದೇ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಐಎಎಫ್ ಎಂಐ-17ವಿ5 ಹೆಲಿಕಾಪ್ಟರ್ ಇದಾಗಿದೆ, ಹೆಲಿಕಾಪ್ಟರ್ನಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಇರುವುದನ್ನು ಭಾರತೀಯ ಸೇನೆ ಖಚಿತಪಡಿಸಿದೆ. ಜತೆಗೆ ತನಿಖೆಗೆ ಆದೇಶಿಸಿದೆ.
ಹವಾಮಾನ ವೈಪರೀತ್ಯವೇ ಹೆಲಿಕಾಪ್ಟರ್ ಪತನಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ತಮಿಳುನಾಡಿನ ಕುನೂರ್ನಲ್ಲಿ ಘಟನೆ ನಡೆದಿದೆ. ಕೊಯಮತ್ತೂರು, ಸುಳೂರ್ ನಡುವೆ ಘಟನೆ ನಡೆದಿದೆ.