ವಿಶೇಷ ರೈಲು ದರ ಹೆಚ್ಚಳ ಪ್ರಯಾಣಿಕರ ಆಕ್ರೋಶ

ಕೂನೂರು: ನೀಲ್ ಗಿರಿ ಮೌಂಟೇನ್ ರೈಲ್ವೇ ಗಾಂಧಿ ಜಯಂತಿ ದಿನದಂದು ತನ್ನ ರೈಲಿನಲ್ಲಿ ಪ್ರಯಾಣಿಸುವವರಿಗೆ ಅತಿ ದುಬಾರಿ ಮೊತ್ತದ ಶುಲ್ಕ ವಿಧಿಸಿರುವುದು ಭಾರೀ ಟೀಕೆಗೆ ಗುರಿಯಾಗಿದೆ.

ಗಾಂಧಿ ಜಯಂತಿ ದಿನದಂದು ನೀಲ್ ಗಿರಿ ಮೌಂಟೇನ್ ರೈಲ್ವೇ ವಿಶೇಷ ರೈಲಿನ ವ್ಯವಸ್ಥೆ ಮಾಡಿತ್ತು. ಗಾಂಧಿ ಜಯಂತಿ ವರ್ಷಾಚರಣೆ ಅಂಗವಾಗಿ ವಿಶೇಷ ರೈಲಿನ ಏರ್ಪಾಡು ನಡೆದಿತ್ತು.

ಮೆಟ್ಟು ಪಾಳ್ಯಂ ನಿಂದ ಕೂನೂರು ತನಕ ಫರ್ಸ್ಟ್ ಕ್ಲಾಸ್ ಟಿಕೆಟ್ ಗೆ ೧,೧೦೦ ರೂ., ಸೆಕೆಂಡ್ ಕ್ಲಾಸ್ ಗೆ ೮೦೦ ರೂ. ನಿಗದಿ ಪಡಿಸಿತ್ತು. ಮೆಟ್ಟುಪಾಳ್ಯಂನಿಂದ ಊಟಿ ಮಾರ್ಗದಲ್ಲಿ ಮೊದಲ ಕ್ಲಾಸ್ಗೆ ೧,೪೫೦ ರೂ., ಸೆಕೆಂಡ್ ಕ್ಲಾಸ್ ಗೆ ೧,೦೫೦ ರೂಪಾಯಿ ಇದೆ.

ಇದನ್ನು ಹೊರತು ಪಡಿಸಿ ಜಿ ಎಸ್ ಟಿ ಎಕ್ಸ್ಟ್ರಾ. ಮೆಟ್ಟುಪಾಳ್ಯಂನಿಂದ ಕೂನೂರು ಬಸ್ ನಲ್ಲಿ ರೂ.೩೬ ಶುಲ್ಕವಿದೆ. ಹೀಗಿರುವಾಗ ರೈಲ್ವೇ ಅಷ್ಟು ದೊಡ್ಡ ಮೊತ್ತ ನಿಗದಿ ಪಡಿಸಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ.

ನೀಲ್ ಗಿರಿ ರೈಲ್ವೇ ನಿಗದಿ ಪಡಿಸಿರುವ ಟಿಕೆಟ್ ಶುಲ್ಕದಲ್ಲಿ ಕೇವಲ ಶ್ರೀಮಂತರು, ಉದ್ಯಮಿಗಳು ಸೆಲಬ್ರಿಟಿಗಳು ಪ್ರಯಾಣಿಸಬಹುದಷ್ಟೇ. ಜನಸಾಮಾನ್ಯರು ರೈಲು ಹತ್ತಬೇಕೆನ್ನುವ ಉದ್ದೇಶ ಅಧಿಕಾರಿಗಳಿಗೆ ಇದ್ದಂತಿಲ್ಲ ಎಂದು ಜನರು ಕಿಡಿ ಕಾರಿದ್ದಾರೆ.

Raksha Deshpande

Recent Posts

ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿ: 40 ಜನರ ರಕ್ಷಣೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ  ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಘಟನೆ ನಡೆದಿದೆ. 

12 mins ago

ಮೋದಿಗೆ ಯಾರೂ ಮತ ಹಾಕಬೇಡಿ ಎಂದಿದ್ದ ಶಿಕ್ಷಕ ಅರೆಸ್ಟ್

ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೋದಿಗೆ ಯಾರೂ ಮತ ಹಾಕಬೇಡಿ ಎಂದು ಮಕ್ಕಳಿಗೆ ಹೇಳಿದ್ದಕ್ಕೆ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

33 mins ago

ಮೇ 24ರಿಂದ ಮೈಸೂರಿನಲ್ಲಿ ಮಾವು, ಹಲಸು ಮೇಳ

ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ  ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…

52 mins ago

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆ ಸಾವು

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ  ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್​ನಲ್ಲಿ ನಡೆದಿದೆ. 

1 hour ago

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಕೆರೆಯಲ್ಲಿ ಮುಳುಗಿ ಮೃತ್ಯು

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ…

2 hours ago

ಪಂಜಾಬ್​​ ವಿರುದ್ಧ ಹೈದರಾಬಾದ್ ಜಯಬೇರಿ : ಪ್ಲೇ ಆಫ್​​ನಲ್ಲಿ ಆರ್​​ಸಿಬಿ ವಿರುದ್ಧ ಕಣಕ್ಕೆ

ಇಂದು ರಾಜೀವ್​ ಗಾಂಧಿ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಪಂಜಾಬ್​​​ ಕಿಂಗ್ಸ್​ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್ ಗೆದ್ದು…

2 hours ago