ಇನ್ಮುಂದೆ ಈ ಊರಿನ ರಸ್ತೆಗಿಳಿಯುವಂತಿಲ್ಲ 15 ವರ್ಷ ಮೇಲ್ಪಟ್ಟ ವಾಹನಗಳು.!

ದೆಹಲಿ : ದೆಹಲಿ ಮತ್ತು ಎನ್‌ಸಿಆರ್‌ ಪ್ರದೇಶಗಳಲ್ಲಿ 10 ವರ್ಷಕ್ಕೂ ಹಳೆಯದಾದ ಡೀಸೆಲ್‌ ಚಾಲಿತ ವಾಹನಗಳು, 15 ವರ್ಷಕ್ಕೂ ಹಳೆಯ ಪೆಟ್ರೋಲ್‌ ಚಾಲಿತ ವಾಹನಗಳನ್ನು ಇನ್ಮುಂದೆ ರಸ್ತೆಗೆ ಇಳಿಸುವಂತಿಲ್ಲ.

ಪ್ರತಿ ವರ್ಷ ವಾಯುಮಾಲಿನ್ಯ ಮಿತಿಮೀರುವ ಪರಿಣಾಮ ‘ವಿಷಾನಿಲ ಕೊಠಡಿ’ಯಂತಾಗುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ದೆಹಲಿ ಸಾರಿಗೆ ಇಲಾಖೆ (ಡಿಟಿಡಿ) ಹೊಸ ಯೋಜನೆ ಶುರುಮಾಡಿದೆ. 10 ವರ್ಷಕ್ಕೂ ಹಳೆಯದಾದ ಡೀಸೆಲ್‌ ಚಾಲಿತ ವಾಹನಗಳು, 15 ವರ್ಷಕ್ಕೂ ಹಳೆಯ ಪೆಟ್ರೋಲ್‌ ರಸ್ತೆಗೆ ಇಳಿಯುವಂತಿಲ್ಲ‌‌ ಈ ನಿಟ್ಟಿನಲ್ಲಿ ಸಂಪೂರ್ಣವಾಗಿ ನಿರ್ಬಂಧ ಹೇರಲಾಗಿದೆ. ಇದು ಕೇಂದ್ರ ಸರ್ಕಾರದ ಸಾರಿಗೆ ಸ್ಕ್ರ್ಯಾಪಿಂಗ್‌ ಪಾಲಿಸಿ ಅನ್ವಯ ಜಾರಿಗೆ ಬಂದಿದೆ.ಈಗಾಗಲೇ ಹೊಸ ಪಾಲಿಸಿಯನ್ನು ಎಲ್ಲ ರಾಜ್ಯಗಳಲ್ಲೂ ಜಾರಿಗೆ ಕೇಂದ್ರ ಮುಂದಾಗಿದೆ. ಸ್ಕ್ರ್ಯಾಪ್‌ ನೀತಿ ಆಯ್ಕೆಗೆ ವಾಹನಗಳ ಮಾಲೀಕರಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ವಾಯುಮಾಲಿನ್ಯವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಸಲುವಾಗಿ ಪ್ರಮುಖವಾಗಿ ವಾಣಿಜ್ಯ ಬಳಕೆಯ ಡೀಸೆಲ್‌ ಚಾಲಿತ ಹಳೆಯ ವಾಹನಗಳನ್ನು ರಸ್ತೆಗೆ ಇಳಿಯದಂತೆ ತಡೆಯುವುದು ಈ ನೀತಿಯ ಉದ್ದೇಶವಾಗಿದೆ.

ಒಂದು ವೇಳೆ ಹಳೆಯ ವಾಹನಗಳನ್ನು ಮಾಲೀಕರು ರಸ್ತೆಗೆ ಇಳಿಸಲೇಬೇಕಾದಲ್ಲಿ ಸಾರಿಗೆ ಇಲಾಖೆಯ ಆಟೊಮೇಟೆಡ್‌ ಪರೀಕ್ಷೆಯಲ್ಲಿ ವಾಹನ ‘ಪಾಸ್‌’ ಆಗಬೇಕು. ಜತೆಗೆ ಹೊಸ ವಾಹನ ಖರೀದಿ ಬಳಿಕ 15 ವರ್ಷ ಕಳೆದ ಮೇಲೆ ಮಾಡಲಾಗುವ ‘ಫಿಟ್‌ನೆಸ್‌ ಪರೀಕ್ಷೆ’, ‘ಎಮಿಷನ್‌ ಟೆಸ್ಟ್‌’ ಗಳಲ್ಲಿ ಕೂಡ ವಾಹನವು ಪಾಸ್‌ ಆಗಲೇಬೇಕಿದೆ. ಇದನ್ನು ಮಾಡಿಸದೆಯೇ ಅಸಡ್ಡೆ ಮಾಡಿ ಹಳೆಯ ವಾಹನವು ರಸ್ತೆಗೆ ಇಳಿದಲ್ಲಿ, 1988ರ ಮೋಟಾರ್‌ ವಾಹನಗಳ ಕಾಯಿದೆ ಅಡಿಯಲ್ಲಿ ಭಾರಿ ದಂಡ ತೆರಬೇಕಾದೀತು.

ಸ್ಕ್ರ್ಯಾಪ್‌ ಮಾಡಲಾದ ವಾಹನದ ಸರ್ಟಿಫಿಕೇಟ್‌ ಪಡೆದು ಹೊಸ ವಾಹನ ಖರೀದಿಗೆ ಮುಂದಾದಲ್ಲಿ ಕೆಲವು ಕಾರು ತಯಾರಿಕೆ ಕಂಪನಿಗಳು ಭರ್ಜರಿ ಕೊಡುಗೆಗಳನ್ನು ಕೂಡ ನೀಡುತ್ತಿವೆ. ಹಳೆಯ ವಾಹನಗಳನ್ನು ಮಹೀಂದ್ರಾ ಕಂಪನಿಯು 8 ರಿಂದ 80 ಸಾವಿರ ರೂ.ಗಳವರೆಗೆ ಖರೀದಿಸುತ್ತಿದೆ ಕೂಡ.

Swathi MG

Recent Posts

ಸರ್ಕಾರಿ ಆಸ್ಪತ್ರೆಯ ಕಾರಿಡಾರ್​ನಲ್ಲಿ ನರ್ಸ್ ವೊಬ್ಬರು ಸ್ಕೂಟಿಯಲ್ಲಿ ಓಡಾಟ

ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ವೊಬ್ಬರು ಕಪ್ಪು ಕನ್ನಡಕ ಹಾಕಿಕೊಂಡು ಒಂದು ವಾರ್ಡ್​ನಿಂದ ಮತ್ತೊಂದು ವಾರ್ಡ್​ನ ರೋಗಿಗಳ ಬಳಿ ಸ್ಕೂಟಿಯಲ್ಲಿ ಹೋಗಿ  ಚಿಕಿತ್ಸೆ…

9 mins ago

ಚಾಮರಾಜನಗರದಲ್ಲಿ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ನಗರದಲ್ಲಿ ಜಿಲ್ಲಾ  ಮಹಿಳಾ ಕಾಂಗ್ರೆಸ್ ಘಟಕ  ಪ್ರತಿಭಟನೆ…

9 mins ago

ರೇವಣ್ಣ ಕಿಡ್ನಾಪ್ ಕೇಸ್​ : ಜಾಮೀನು ಅರ್ಜಿ ವಿಚಾರಣೆ ​ಮುಂದೂಡಿದ ಕೋರ್ಟ್​

ಪ್ರಜ್ವಲ್ ರೇವಣ್ಣ ಪೆನ್​ ಡ್ರೈವ್ ಕೇಸ್​ನಲ್ಲಿ ಸಂತ್ರಸ್ತ ಮಹಿಳೆಯನ್ನ ಕಿಡ್ನಾಪ್ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ ಹೆಚ್​ ಡಿ ರೇವಣ್ಣ ಎಸ್​ಐಟಿ…

16 mins ago

ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ

ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಅವರು  ಕಾಮಾಕ್ಯ ದೇವಸ್ಥಾನಕ್ಕೆ  ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕುರಿತ ಫೋಟೋಗಳು…

27 mins ago

ಎಚ್ಚರ! ಚಿಕನ್ ಶವರ್ಮಾ ತಿಂದು ಓರ್ವ ಯುವಕ ಸಾವು : ಐವರು ಅಸ್ವಸ್ಥ

ಚಿಕನ್‌ ಶವರ್ಮ ಎಂದರೆ ಕೆಲವರಿಗೆ ತುಂಬ ಪ್ರಿಯ ಇದರ ಅಡ್ಡ ಪರಿಣಾಮ ತಿಳಿದಿದ್ದರು ತಿನ್ನುವುದು ಕಡಿಮೆ ಮಾಡುವುದಿಲ್ಲ ಆದರೆ ಇದೇ…

29 mins ago

ಮುಜರಾಯಿ ಇಲಾಖೆಗೆ ಒಳಪಡುವ ದೇಗುಲಗಳಲ್ಲಿ ವಸ್ತ್ರಸಂಹಿತೆ ಜಾರಿಗೆ ಅಭಿಯಾನ

ಜಿಲ್ಲೆಯ ಮುಜರಾಯಿ ಇಲಾಖೆಗೆ ಒಳಪಡುವ ದೇಗುಲಗಳಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡುವ ಬಗ್ಗೆ ಮೇ8ರಂದು ಅಭಿಯಾನ ನಡೆಸಲು ಚಿಂತನೆ ನಡೆಸಲಾಗಿದೆ.

37 mins ago