ತಮಿಳುನಾಡಿನ ಸೇಲಂನನಲ್ಲಿ ಅಡುಗೆ ಅನಿಲದ ಸಿಲಿಂಡರ್ ಸ್ಫೋಟವಾಗಿದೆ. ಇದರ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದು, ಹತ್ತು ಮಂದಿ ಗಾಯಗೊಂಡಿದ್ದಾರೆ.
ಕಳಿಂಗಪಟ್ಟಿ ಎಂಬಲ್ಲಿನ ಪಾಂಡುರಂಗನ್ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, 80 ವರ್ಷದ ರಾಜಲಕ್ಷ್ಮೀ ಎಂಬುವರು ಮೃತಪಟ್ಟಿದ್ದಾರೆ. ಚಹಾ ಮಾಡಲೆಂದು ಗ್ಯಾಸ್ ಆನ್ ಮಾಡಿದಾಗ ಭಾರೀ ಪ್ರಮಾಣದಲ್ಲಿ ಸ್ಫೋಟವಾಗಿದೆ.
ಗೋಪಿ (52) ಎಂಬುವರು ಸ್ಫೋಟದಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ವೆಂಕಟರಾಜನ್, ಇಂದಿರಾಣಿ, ಮೋಹನ್ ರಾಜ್, ಧನಲಕ್ಷ್ಮೀ, ಸುದರ್ಶನ್, ಗಣೇಶನ್, ನಾಗಸುತ, ಗೋಪಾಲ್, ಉಷಾರಾಣಿ, ಲೋಕೇಶ್ ಕೂಡ ಗಾಯಗೊಂಡಿದ್ದು, ಎಲ್ಲರೂ ಸೇಲಂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
10ವರ್ಷದ ಬಾಲಕಿಯೊಬ್ಬಳು ಸ್ಫೋಟದಿಂದ ಕುಸಿದ ಮನೆಯ ಅವಶೇಷಗಳಡಿ ಸಿಲುಕಿದ್ದಳು. ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.