News Karnataka Kannada
Monday, April 29 2024
ತಮಿಳುನಾಡು

ಅಪ್ರಾಪ್ತೆಯನ್ನು ಗರ್ಭಿಣಿಯನ್ನಾಗಿಸಿದ 12 ವರ್ಷದ ಬಾಲಕ!

Rape
Photo Credit :

ಚೆನ್ನೈ:  ತಂಜಾವೂರಿನಲ್ಲಿ ಹದಿನೇಳರ ಹರೆಯದ ಬಾಲಕಿಯು ಗರ್ಭಿಣಿಯಾಗಿ ಹೆಣ್ಣು ಮಗುವಿಗೆ ಜನ್ಮನೀಡಲು ಕಾರಣನಾದ ಆರೋಪದಲ್ಲಿ 12 ವರ್ಷದ ಬಾಲಕನ ವಿರುದ್ಧ ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ ಘಟನೆ ತಂಜಾವೂರಿನಲ್ಲಿ ನಡೆದಿದೆ.

ತಪಾಸಣೆಯ ವೇಳೆ ಆಕೆ 9 ತಿಂಗಳ ತುಂಬು ಗರ್ಭಿಣಿಯಾಗಿರುವುದು ಗೊತ್ತಾಗಿದೆ.ಅದೇ ದಿನ ಆಕೆ ಹೆಣ್ಣುಮಗುವಿಗೆ ಜನ್ಮವನ್ನಿತ್ತಿದ್ದಾಳೆ.

ಬಾಲಕಿ ಹೊಟ್ಟೆ ನೋವಿನಿಂದ ನರಳುತ್ತಿದ್ದ ಕಾರಣ ಪೋಷಕರು ಆಕೆಯನ್ನು ತಂಜಾವೂರು ಜಿಲ್ಲೆಯ ರಾಜಾ ಮಿರಾಸುದಾರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದುಕ್ಷಣವೇ ತಂಜಾವೂರಿನ ಮಹಿಳಾ ಠಾಣೆಗೆ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದು, ಈ ಘಟನೆಗೆ ಕಾರಣನಾದ ಆರೋಪದಲ್ಲಿ 12 ವರ್ಷದ ಬಾಲಕನ ವಿರುದ್ಧ ಪೋಸ್ಕೋ ಕಾಯ್ದೆಯ ಎರಡು ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಳಿಕ ಆತನನ್ನು ಬಾಲಾಪರಾಧಿಗಳ ಗೃಹಕ್ಕೆ ಕಳುಹಿಸಲಾಗಿದೆ.

ಬಾಲಕನಲ್ಲದೆ ಬೇರೆ ಯಾರಾದರೂ ಇದರಲ್ಲಿ ಭಾಗಿಯಾಗಿದ್ದಾರೋ ಎಂಬ ಕುರಿತಾಗಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ, 9 ತಿಂಗಳ ಗರ್ಭಿಣಿಯಾಗುವ ತನಕ ಕುಟುಂಬಕ್ಕೆ ಇದು ಗೊತ್ತಾಗಲಿಲ್ಲವೇ ಎಂಬ ಕುರಿತೂ ವಿಚಾರಣೆ ನಡೆಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು