News Karnataka Kannada
Thursday, May 02 2024
ರಾಜಸ್ಥಾನ

ಸಂತಾನ ಭಾಗ್ಯಕ್ಕಾಗಿ ಖೈದಿಗೆ ಪೇರೋಲ್ ನೀಡಿದ ಕೋರ್ಟ್

Untitled 13
Photo Credit :

ಜೋಧಪುರ: ಜೈಲುವಾಸದಲ್ಲಿರುವ ಖೈದಿಗಳು ಕೆಲವು ಅನಿವಾರ್ಯ ಕಾರಣಗಳಿಂದಾಗಿ ಪೆರೋಲ್‌ ಪಡೆಯಲು ಕೋರ್ಟ್‌ ಮೊರೆ ಹೋಗುವುದು ಸಹಜ. ಆದರೆ, ಇಲ್ಲೊಬ್ಬ ಖೈದಿಗೆ ಹೆಂಡತಿಯನ್ನು ಗರ್ಭಿಣಿ ಮಾಡಲು ರಾಜಸ್ಥಾನ್‌ ಹೈಕೋರ್ಟ್‌ 15 ದಿನ ಪೆರೋಲ್‌ ಮಂಜೂರು ಮಾಡಿದೆ.

ಅಪರೂಪದ ಘಟನೆಯೊಂದರಲ್ಲಿ ಖೈದಿಗೆ ತನ್ನ ಹೆಂಡತಿಯನ್ನು ಗರ್ಭಿಣಿ ಮಾಡಲು 15 ದಿನಗಳ ಪೆರೋಲ್ ನೀಡಿ ರಾಜಸ್ಥಾನ ಹೈಕೋರ್ಟ್ ಇತ್ತೀಚೆಗೆ ಆದೇಶ ಹೊರಡಿಸಿದೆ.

ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಮತ್ತು ಫರ್ಜಂದ್ ಅಲಿ ಅವರ ದ್ವಿಸದಸ್ಯ ಪೀಠವು 34 ವರ್ಷದ ಖೈದಿ ನಂದ್‌ಲಾಲ್ ಅವರ ಪತ್ನಿ ರೇಖಾ ಅವರ ‘ಸಂತಾನದ ಹಕ್ಕು’ ಆಧಾರದ ಮೇಲೆ ತನ್ನ ಪತಿಯನ್ನು ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದೆ.

ಅಪರಾಧಿಯ ಜೈಲುವಾಸ ಆತನ ಹೆಂಡತಿಯ ಲೈಂಗಿಕ ಅಪೇಕ್ಷೆಗಳು ಮತ್ತು ಭಾವನಾತ್ಮಕ ಅಗತ್ಯಗಳ ಮೇಲೆ ಪರಿಣಾಮ ಬೀರಿದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಋಗ್ವೇದ ಸೇರಿದಂತೆ ಹಿಂದೂ ಧರ್ಮಗ್ರಂಥಗಳನ್ನೂ ನ್ಯಾಯಾಲಯ ಉಲ್ಲೇಖಿಸಿದೆ. ಖೈದಿಗಳಿಗೆ 15 ದಿನಗಳ ಪೆರೋಲ್ ನೀಡಲು ಅವರು ಜುದಾಯಿಸಂ, ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮದ ಸಿದ್ಧಾಂತಗಳನ್ನು ಪರಿಗಣಿಸಲಾಗಿದೆ.

16 ಸಂಸ್ಕಾರಗಳಲ್ಲಿ ಮಗುವನ್ನು ಗರ್ಭಧರಿಸುವುದು ಮಹಿಳೆಯ ಮೊದಲ ಮತ್ತು ಅಗತ್ಯ ಹಕ್ಕು ಎಂದು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು