ಅಹಮದಾಬಾದ್: ಬಂಧಿತ ಆರೋಪಿಗಳನ್ನು ಅಹಮದಾಬಾದ್ ನಿವಾಸಿಗಳಾದ ಕ್ಷಿತಿಜ್ ಪಾಂಡೆ (22), ಜಿತೇಂದ್ರ ಪ: ಗುಜರಾತ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಲಯದಲ್ಲಿ ನಮಾಜ್ ಮಾಡಿದ್ದ ವಿದೇಶ ವಿದ್ಯಾರ್ಥಿಗಳ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಬಂಧಿಸಿದಂತೆ ಮತ್ತೆ ಮೂವರು ಅರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಟೇಲ್ (31) ಮತ್ತು ಸಾಹಿಲ್ ದುಧಾತಿಯಾ (21) ಎಂದು ಗುರುತಿಸಲಾಗಿದೆ.
ಘಟನೆಗೆ ಸಂಬಂಧಿಸಿ ಇದುವರೆಗೆ ಐವರು ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಾಸ್ಟೆಲ್ನ ಭದ್ರತಾ ಸಿಬ್ಬಂದಿ ನೀಡಿದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಭಾನುವಾರ ಹಿತೇಶ್ ಮೆವಾಡಾ ಮತ್ತು ಭರತ್ ಪಟೇಲ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.
ಗುಂಪೊಂದು ಶನಿವಾರ ರಾತ್ರಿ ಹಾಸ್ಟೆಲ್ಗೆ ನುಗ್ಗಿ ದಾಂದಲೆ ನಡೆಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಘೋಷಣೆ ಕೂಗುತ್ತಾ ಹಾಸ್ಟೆಲ್ಗೆ ನುಗ್ಗಿದ ಕೆಲವರು ಕಲ್ಲೆಸೆಯುವ ಮತ್ತು ಬೈಕ್ಗಳಿಗೆ ಹಾನಿ ಮಾಡುವ ದೃಶ್ಯ ವಿಡಿಯೊದಲ್ಲಿದೆ.’20-25 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.