News Karnataka Kannada
Thursday, May 16 2024
ದೇಶ

ಗಮನಸೆಳೆದ ಸ್ಟಾಂಡ್ ವಿಥ್ ಇಸ್ರೇಲ್ ಪ್ಲಕಾರ್ಡ್

Stand with Israel placard that drew attention
Photo Credit : News Kannada

ಅಹಮ್ಮದಾಬಾದ್‌: ಏಕದಿನ ವಿಶ್ವಕಪ್​ನ 12ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಿವೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಇನ್ನು ರವೀಂದ್ರ ಜಡೇಜಾ ಎಸೆದ 43ನೇ ಓವರ್​ನ 5ನೇ ಎಸೆತದಲ್ಲಿ ಹ್ಯಾರಿಸ್ ರೌಫ್ ಎಲ್​ಬಿಡಬ್ಲ್ಯೂ…ಔಟ್ ಆಗಿದ್ದಾರೆ. ಈ ಕ್ರಿಕೆಟ್‌ ಪಂದ್ಯಾಟ ಮತ್ತೊಂದು ಮಹತ್ವದ ಕ್ಷಣಕ್ಕೆ ಸಾಕ್ಷಿಯಾಗಿದೆ.

ಲಕ್ಷಕ್ಕೂ ಅಧಿಕ ಅಭಿಮಾನಿಗಳಿಂದ ತುಂಬಿರುವ ಈ ಕ್ರೀಡಾಂಗಣದಲ್ಲಿ ಇಂಡಿಯಾ ಸ್ಟಾಂಡ್ ವಿಥ್ ಇಸ್ರೇಲ್ ಪ್ಲಕಾರ್ಡ್ ಭಾರಿ ಸದ್ದು ಮಾಡಿದೆ. ವಿಶೇಷ ಅಂದರೆ ಇಸ್ರೇಲ್ ಸರ್ಕಾರ ಈ ಪ್ಲಕಾರ್ಡ್‌ಗೆ ಪ್ರತಿಕ್ರಿಯೆ ನೀಡಿದೆ.

ಅಭಿಮಾನಿಗಳು ಕಾದು ಕುಳಿತಿದ್ದ ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯ ರೋಟಕ ಘಟ್ಟ ತಲುಪಿದೆ. ಅಹಮ್ಮದಾಬಾದ್‌ನ ಮೋದಿ ಕ್ರೀಡಾಂಗಣದಲ್ಲಿ ಲಕ್ಷಕ್ಕೂ ಅಧಿಕ ಅಭಿಮಾನಿಗಳು ಈ ಪಂದ್ಯಕ್ಕೆ ಸಾಕ್ಷಿಯಾಗಿದ್ದಾರೆ.

ಪಾಕಿಸ್ತಾನದ ದಿಟ್ಟ ಬ್ಯಾಟಿಂಗ್ ಹೋರಾಟಕ್ಕೆ ಬ್ರೇಕ್ ಹಾಕಿರುವ ಭಾರತ, 191 ರನ್‌ಗೆ ಪಾಕ್ ತಂಡವನ್ನು ಆಲೌಟ್ ಮಾಡಿದೆ . ಇಡೀ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಕ್ರಿಕೆಟಿಗರಿಗೆ ವಿವಿಧ ರೀತಿಯಲ್ಲಿ ಬೆಂಬಲ ನೀಡುತ್ತಿದ್ದಾರೆ. ತ್ರಿವರ್ಣ ಧ್ವಜ, ಕ್ರಿಕೆಟಿಗರ ಪೋಸ್ಟರ್‌ಗಳು ರಾರಾಜಿಸುತ್ತಿದೆ.

ಈ ಪೋಸ್ಟರ್ ನಡುವೆ ಅಭಿಮಾನಿಯೊಬ್ಬರು ಇಂಡಿಯಾ ಸ್ಟಾಂಡ್ ವಿಥ್ ಇಸ್ರೇಲ್ ಪ್ಲಕಾರ್ಡ್ ಗಮನಸೆಳೆದಿದೆ. ಹರ್ಷಲ್ ಪುರೋಹಿತ್ ಎಕ್ಸ್ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.

ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಭಾರತ, ಇಸ್ರೇಲ್ ಬೆಂಬಲಕ್ಕಿದೆ ಎಂದು ಬರೆದಿರುವ ಪೋಸ್ಟರ್ ಇದಾಗಿದೆ. ಜೊತೆಗೆ ಪ್ರಧಾನಿ ಮೋದಿ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಫೋಟೋ ಇರುವ ಪ್ಲಕಾರ್ಡ್ ಭಾರಿ ಸದ್ದು ಮಾಡುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು