ದಕ್ಷಿಣ ಸಿಕ್ಕಿಂ: ಸಿಕ್ಕಿಂನ ರವಂಗ್ಲಾದಲ್ಲಿ ಇಂದು ಮುಂಜಾನೆ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 3.7 ರಷ್ಟು ಇತ್ತು ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ದೃಢಪಡಿಸಿದೆ.
ಇತ್ತೀಚೆಗೆ ಆಗಾಗ ಭೂಕಂಪನದ ವರದಿಗಳು ದಾಖಲಾಗುತ್ತವೆ. ನಿನ್ನೆ(ಜನವರಿ 4)ಯಷ್ಟೇ ಜಪಾನ್ನ ಟೋಕಿಯೊ ಪ್ರಿಫೆಕ್ಚರ್ನ ಒಗಸವಾರ ದ್ವೀಪಗಳಲ್ಲಿ 6.3 ತೀವ್ರತೆಯ ಭೂಕಂಪನವು ದಾಖಲಾಗಿತ್ತು. ಆದರೆ ಇಂದೂ ಕೂಡ ಸಿಕ್ಕಿಂನಲ್ಲೂ ಭೂಕಂಪನದ ವರದಿ ಬಂದಿದೆ.
ಎನ್ಸಿಎಸ್ ನೀಡಿದ ಮಾಹಿತಿ ಅನ್ವಯ ಈ ಭೂಕಂಪನ ಭೂಮಿಯ 5 ಕಿ.ಮೀ ಆಳದಲ್ಲಿ ಸಂಭವಿಸಿದ್ದು, ರವಂಗ್ಲಾದ ಉತ್ತರ ಭಾಗದಲ್ಲಿ ತಡರಾತ್ರಿ ಮೂರು ಗಂಟೆ ಸಮಯದಲ್ಲಿ ಸಂಭವಿಸಿದೆ. ಈ ಸಂಬಂಧ ಎನ್ಸಿಎಸ್ ಟ್ವೀಟ್ ಮಾಡಿದೆ. ಈ ಘಟನೆಯಲ್ಲಿ ಯಾವುದೇ ಸಾವು ನೋವಿನ ಘಟನೆ ವರದಿಯಾಗಿಲ್ಲ.