ನವದೆಹಲಿ: ಇದೇ ಮೊದಲ ಬಾರಿಗೆ ದೇಶದ ಶೇರು ಮಾರುಕಟ್ಟೆ ದಾಖಲೆಯ ಗಡಿಯನ್ನು ತಲುಪಿದೆ. ಮೊದಲ ಬಾರಿಗೆ ಸೆನ್ಸೆಕ್ಸ್ 72,000 ಗಡಿ ದಾಟಿದ್ರೇ, ನಿಫ್ಟಿ 21,650 ತಲುಪಿದೆ.
ಎಚ್ಡಿಎಫ್ಸಿ ಬ್ಯಾಂಕ್, ಇನ್ಫೋಸಿಸ್, ಲಾರ್ಸೆನ್ ಆಂಡ್ ಟೂಬ್ರೊ, ಭಾರ್ತಿ ಏರ್ಟೆಲ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳ ಲಾಭದಿಂದಾಗಿ ಸೆನ್ಸೆಕ್ಸ್ ಮೊದಲ ಬಾರಿಗೆ 72,000 ಗಡಿ ದಾಟಿದೆ ಮತ್ತು ನಿಫ್ಟಿ 50 ಸೂಚ್ಯಂಕವು 21,600 ಕ್ಕಿಂತ ಹೆಚ್ಚಾಗಿದೆ.
ಸೆನ್ಸೆಕ್ಸ್ 679 ಪಾಯಿಂಟ್ ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ 72,016 ಕ್ಕೆ ತಲುಪಿದೆ ಮತ್ತು ನಿಫ್ಟಿ 50 ಸೂಚ್ಯಂಕವು 224 ಪಾಯಿಂಟ್ ಏರಿಕೆ ಕಂಡು 21,665.20 ಕ್ಕೆ ತಲುಪಿದೆ ಒಟ್ಟಾರೆಯಾಗಿ ಸೆನ್ಸೆಕ್ಸ್ ಮೊದಲ ಬಾರಿಗೆ 72,000 ಗಡಿ ದಾಟಿದೆ. ನಿಫ್ಟಿ 213.40 ಪಾಯಿಂಟ್ ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ 21,654.75 ಕ್ಕೆ ತಲುಪಿದೆ.