News Karnataka Kannada
Friday, May 10 2024
ದೇಶ

ಚಂದ್ರಯಾನದ ಕೌಂಟ್‌ಡೌನ್‌ ಧ್ವನಿಯಾಗಿದ್ದ ವಿಜ್ಞಾನಿ ವಲಮರ್ತಿ ನಿಧನ

Scientist Valamarthi, who was the voice of the countdown for Chandrayaan, passes away
Photo Credit : News Kannada

ಚೆನ್ನೈ: ಚಂದ್ರಯಾನ ಯಶಸ್ಸು ಭಾರತದ ಕೀರ್ತಿಯನ್ನು ಮುಗಿಲೆತ್ತರಕ್ಕೆ ಏರಿಸಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ರಷ್ಯಾ ಸೇರಿದಂತೆ ಮುಂದುವರಿದ ರಾಷ್ಟ್ರಗಳನ್ನೇ ಮೀರಿಸುವಂತೆ ದೇಶ ಸಾಧನೆ ಮಾಡುತ್ತಿದೆ. ಈ ಯಶಸ್ಸಿನ ಹಿಂದೆ ಇಸ್ರೋ ವಿಜ್ಞಾನಿಗಳ ಶ್ರಮ ಸಾಕಷ್ಟಿದೆ. ಅದೇ ರೀತಿ ಚಂದ್ರಯಾನ 3 ಉಡಾವಣೆ ಸಂದರ್ಭದಲ್ಲಿ ಕೌಂಟ್​ಡೌನ್ ಹಿಂದಿನ ಧ್ವನಿಯಾಗಿದ್ದ ಇಸ್ರೋ ವಿಜ್ಞಾನಿ ವಲಮರ್ತಿ ಹೃದಯಸ್ತಂಭನದಿಂದ ನಿಧನರಾಗಿದ್ದಾರೆ.

ಜುಲೈ 14 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಅನ್ನು ಉಡಾವಣೆ ಮಾಡಲಾಯಿತು. ಇಸ್ರೋ ರಾಕೆಟ್ ಉಡಾವಣೆಯ ಸಮಯದಲ್ಲಿ ಕೌಂಟ್​ಡೌನ್ ಎಂಬುದು ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಇದು ಇಡೀ ರಾಷ್ಟ್ರವನ್ನು ಒಟ್ಟುಗೂಡಿಸುವ ಒಂದು ಅಪ್ರತಿಮ ಘಟನೆಯಾಗಿದೆ.

ಚಂದ್ರಯಾನ 3ರ ವೇಳೆ ಕೇಳಿದ್ದ ಕೌಂಟ್​ಡೌನ್ ಧ್ವನಿಯಾಗಿದ್ದ ವಿಜ್ಞಾನಿ ವಲಮರ್ತಿ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು, ಚೆನ್ನೈನ ಆಸ್ಪತ್ರೆಯಲ್ಲಿ ನಿಧನರಾದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 4 / 5. Vote count: 5

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು