News Karnataka Kannada
Saturday, May 04 2024
ರಾಜಸ್ಥಾನ

ವಿಡಿಯೋ ವೈರಲ್: ‘ಮನಿ ಹೇಯ್ಸ್ಟ್’ ದಿರಿಸಿನಲ್ಲಿ ಬಂದು ನೋಟುಗಳನ್ನು ಎಸೆದ ಯುವಕ

Video goes viral: Man in 'money heist' dress comes in car and throws notes
Photo Credit : Twitter

ಜೈಪುರ: ‘ಮನಿ ಹೇಯ್ಸ್ಟ್’ನ ಪಾತ್ರವೊಂದು ಧರಿಸಿರುವ ಕೆಂಪು ಬಣ್ಣದ ದಿರಿಸನ್ನು ಧರಿಸಿಕೊಂಡು, ತನ್ನ ಕಾರಿನ ಮೇಲಿಂದ ನೋಟನ್ನು ಎಸೆಯುತ್ತಿರುವ ಜೈಪುರ ಯುವಕನೊಬ್ಬನ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಈ ವಿಚಿತ್ರ ವರ್ತನೆಯು ಸಾರ್ವಜನಿಕರಲ್ಲಿ ಗಾಬರಿ ಹುಟ್ಟಿಸಿದ್ದು, ಸಂಚಾರ ದಟ್ಟಣೆಗೂ ಕಾರಣವಾಗಿದೆ. ಈ ಘಟನೆಯು ಜೈಪುರದ ಮಾಳವಿಯಾ ನಗರದಲ್ಲಿನ ಗೌರವ್ ಟವರ್ ಬಳಿ ನಡೆದಿದೆ ಎಂದು ವರದಿಯಾಗಿದೆ.

ಈ ವೀಡಿಯೊ ವೈರಲ್ ಆದ ನಂತರ, ಘಟನೆಯಲ್ಲಿ ಭಾಗಿಯಾಗಿದ್ದ ಯುವಕನನ್ನು ಜೈಪುರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಜ್ಞಾನಚಂದ್ ಯಾದವ್ ಬಂಧಿಸಿದ್ದಾರೆ. ಆ ಯುವಕನ ಎಸೆದಿದ್ದ ನೋಟಿನ ಮುಖಬೆಲೆಯು ರೂ. 10 ಮತ್ತು ರೂ. 20ರದಾಗಿತ್ತು. ಈ ಪ್ರಕರಣದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದು, ಯುವಕನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು