News Karnataka Kannada
Monday, May 13 2024
ರಾಜಸ್ಥಾನ

ನೀಟ್​ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿ ಆತ್ಮಹತ್ಯೆ

Student commits suicide while preparing for NEET exam
Photo Credit : News Kannada

ರಾಜಸ್ಥಾನ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಗೆ ತಯಾರಿ ನಡೆಸುತ್ತಿದ್ದ 18 ವರ್ಷದ ವಿದ್ಯಾರ್ಥಿ ರಾಜಸ್ಥಾನದ ಸಿಕಾರ್ ಜಿಲ್ಲೆಯ ಖಾಸಗಿ ಹಾಸ್ಟೆಲ್‌ನಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.

ಭರತ್‌ಪುರ ಜಿಲ್ಲೆಯ ನಾಡಬಾಯಿ ಪಟ್ಟಣದ ನಿವಾಸಿ ನಿತಿನ್ ಫೌಜ್ದಾರ್ ನೀಟ್‌ಗೆ ತಯಾರಿ ನಡೆಸಲು ಜೂನ್‌ನಲ್ಲಿ ಸಿಕಾರ್‌ಗೆ ಬಂದಿದ್ದರು.

ಆತ ಕೋಚಿಂಗ್ ಸೆಂಟರ್‌ನಲ್ಲಿ ತಯಾರಿ ನಡೆಸುತ್ತಿದ್ದಮತ್ತು ಶನಿವಾರ ತಮ್ಮ ತರಗತಿಯನ್ನು ಮುಗಿಸಿ ಹೋಗಿದ್ದ ಎಂದು ಉದ್ಯೋಗ್ ನಗರ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಸುರೇಂದ್ರ ಡೆಗ್ರಾ ತಿಳಿಸಿದ್ದಾರೆ.

ಫೌಜ್‌ದಾರ್‌ನ ರೂಮ್‌ಮೇಟ್ ಕೋಣೆಯ ಒಳಗಿನಿಂದ ಚಿಲಕ ಹಾಕಿರುವುದನ್ನು ಕಂಡು, ಕಿಟಕಿ ತೆರೆದು ನೋಡಿದಾಗ ವಿದ್ಯಾರ್ಥಿಯ ದೇಹವು ಸೀಲಿಂಗ್ ಫ್ಯಾನ್‌ಗೆ ನೇತಾಡುತ್ತಿರುವುದು ಕಾಣಿಸಿತ್ತು ಎಂದು ಎಸ್‌ಎಚ್‌ಒ ಹೇಳಿದರು.

ಈ ಹಿಂದೆ ಅಂದರೆ ಸೆ.5 ರಂದು, 16 ವರ್ಷದ NEET ಆಕಾಂಕ್ಷಿ ಕೌಶಲ್ ಮೀನಾ ತನ್ನ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು