News Karnataka Kannada
Sunday, April 28 2024
ರಾಜಸ್ಥಾನ

ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಐವರು ಸಾವು

ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ಘಟನೆ ರಾಜಸ್ಥಾನದ ಬಿಕೆನರ್​​ನಲ್ಲಿ ನಡೆದಿದೆ. 
Photo Credit : News Kannada

ರಾಜಸ್ಥಾನ:  ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ಘಟನೆ ರಾಜಸ್ಥಾನದ ಬಿಕೆನರ್​​ನಲ್ಲಿ ನಡೆದಿದೆ.

ಮೃತ ನಾಲ್ವರು ಕೂಡ ಡಾಕ್ಟರ್ ಆಗಿದ್ದರು. ಡಾಕ್ಟರ್ ಪ್ರತೀಕ್, ಇವರ ಪತ್ನಿ ಡಾಕ್ಟರ್ ಹೇಟಲ್, ಡಾಕ್ಟರ್ ಪೂಜಾ ಇವರ ಪತಿ ಡಾ. ಕರಣ್ ಮೃತ ದುರ್ದೈವಿಗಳು. ಪೂಜಾ ಮತ್ತು ಕರಣ್ ಅವರ 18 ತಿಂಗಳ ಮಗು  ಕೂಡ ಸಾವನ್ನಪ್ಪಿದೆ.

ಬಿಕೆನರ್​​ನ ಭರತ್ಮಲಾ ಹೈವೇನಲ್ಲಿ SUV ವಾಹನ ಮತ್ತು ಟ್ರಕ್ ನಡುವೆ ಅಪಘಾತ ಸಂಭವಿಸಿದೆ.

ಇವರು ಗುಜರಾತ್​ನ ಕಚ್ ನಿವಾಸಿಗಳಾಗಿದ್ದರು. ಸರ್ಕಾರಿ ಆಸ್ಪತ್ರೆಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಜಮ್ಮು-ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋಗಿದ್ದರು, ವಾಪಸ್ ಆಗುವ ವೇಳೆ ದುರ್ಘಟನೆ ಸಂಭವಿಸಿದೆ.

ಅಪಘಾತಕ್ಕೆ ಒಳಗಾಗಿರುವ ವೈದ್ಯಾಧಿಕಾರಿಗಳ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು