ರಾಜಸ್ಥಾನ: ಬಿಜೆಪಿ ಸಚಿವರಿದ್ದ ವೇದಿಕೆಯೊಂದು ಕುಸಿದು ಬಿದ್ದಿದೆ. ರಾಜಸ್ಥಾನದ ಭಜನ್ಲಾಲ್ ಸರ್ಕಾರದ ಸಚಿವ ಹೀರಾಲಾಲ್ ನಗರ್ ಅವರ ಸ್ವಾಗತ ಸಮಾಂಭದಲ್ಲಿ ವೇದಿಕೆ ಕುಸಿದು ಬಿದ್ದಿದೆ. ಸಂಗೋಡು ಪೇಟೆಯಲ್ಲಿ ವೇದಿಕೆಯ ಮೇಲೆ ಸಚಿವರ ಸನ್ಮಾನ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಈ ಸಂದರ್ಭದಲ್ಲಿ ವೇದಿಕೆ ಮೇಲೆ ಹೆಚ್ಚು ಮಂದಿ ಹತ್ತಿದ ಕಾರಣ ದುರ್ಬಲಗೊಂಡ ವೇದಿಕೆ ಕೆಳಕ್ಕೆ ಕುಸಿದೆ.
ದುರ್ಘಟನೆಯಲ್ಲಿ ನಾಲ್ಕರಿಂದ ಐವರಿಗೆ ಸಣ್ಣಪುಟ್ಟ ಗಾಯವಾಗಿದೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ವೇದಿಕೆ ಕುಸಿದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಚಿವ ಹೀರಾಲಾಲ್ ನಗರ್ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಬರುತ್ತಿದ್ದರು.
ಈ ಹಿನ್ನೆಲೆಯಲ್ಲಿ ಅವರಿಗೆ ಅದ್ದೂರಿ ಸ್ವಾಗತ ನೀಡಲು ನಿರ್ಮಿಸಿದ್ದ ವೇದಿಕೆ ಅದಾಗಿತ್ತು. ಸದ್ಯ ಈ ಘಟನೆಯ ದರಶಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
कोटा में राज्यमंत्री हीरालाल नागर के स्वागत समारोह में टूटा मंच
• मंत्री नागर, सांगोद प्रधान सहित 5 लोगों को आई चोट, दो की हालत बताई जा रही गंभीर#kota #Rajasthan pic.twitter.com/LiKRMMbYsy
— Avdhesh Pareek (@Zinda_Avdhesh) January 4, 2024