News Karnataka Kannada
Tuesday, April 30 2024
ರಾಜಸ್ಥಾನ

ಆನ್‌ಲೈನ್‌ನಲ್ಲೇ ಪಾಕಿಸ್ತಾನದ ವಧುವನ್ನು ವರಿಸಿದ ಭಾರತದ ವರ

Indian groom marries Pakistani bride online
Photo Credit : IANS

ಜೈಪುರ: ಕಳೆದ ಕೆಲ ದಿನಗಳಿಂದ ಸಚಿನ್-ಸೀಮಾ, ಅಂಜು-ನಸ್ರುಲ್ಲಾ ಜೋಡಿಗಳು ಭಾರತ-ಪಾಕಿಸ್ತಾನದ ಗಡಿಯಾಚೆಗಿನ ಸಂಬಂಧಕ್ಕಾಗಿ ಭಾರೀ ಸುದ್ದಿಯಾಗಿದ್ದಾರೆ. ಇದೀಗ ಭಾರತದ ವ್ಯಕ್ತಿಯೊಬ್ಬ ಪಾಕಿಸ್ತಾನದ ವಧುವನ್ನು ವರಿಸಿರುವ ಘಟನೆ ಸದ್ದುಮಾಡುತ್ತಿದೆ. ವಿಶೇಷವೇನೆಂದರೆ ಜೋಡಿ ಮದುವೆಯಾಗಿರುವುದು ಆನ್‌ಲೈನ್‌ನಲ್ಲಿ.

ರಾಜಸ್ಥಾನದ ಜೋಧ್‌ಪುರದ ನಿವಾಸಿ ಅರ್ಬಾನ್ ಪಾಕಿಸ್ತಾನದ ಅಮೀನಾಳನ್ನು ಮದುವೆಯಾಗಿದ್ದಾನೆ. ವಧುವಿಗೆ ಮದುವೆಗಾಗಿ ಭಾರತಕ್ಕೆ ಬರಲು ವೀಸಾ ಸಿಗದ ಹಿನ್ನೆಲೆ ಆನ್‌ಲೈನ್ ವೀಡಿಯೋ ಕಾನ್ಫರೆನ್ಸ್ ಮೂಲಕವೇ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

ವರದಿಗಳ ಪ್ರಕಾರ ಮದುವೆ ಕಾರ್ಯಕ್ರಮ ಎಲ್ಲಾ ಬುಧವಾರ ನೆರವೇರಿದೆ. ಎರಡೂ ಕಡೆಯ ಕುಟುಂಬದ ಸದಸ್ಯರು ವೀಡಿಯೋ ಕಾನ್ಫರೆನ್ಸ್ ಮೂಲಕವೇ ಶುಭ ಸಮಾರಂಭದಲ್ಲಿ ಭಾಗವಹಿಸಿ, ನವ ವಧು ಹಾಗೂ ವರರಿಗೆ ಶುಭಹಾರೈಸಿದ್ದಾರೆ.

ಸಿವಿಲ್ ಗುತ್ತಿಗೆದಾರ ಮೊಹಮ್ಮದ್ ಅಫ್ಜಲ್ ಅವರ ಕಿರಿಯ ಮಗ ಅರ್ಬಾಜ್, ನವವಿವಾಹಿತ ವಧುವಿನ ಭಾರತ ಪ್ರವೇಶಕ್ಕಾಗಿ ಶೀಘ್ರದಲ್ಲೇ ವೀಸಾಕ್ಕಾಗಿ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ. ಪ್ರಸ್ತುತ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿರುವ ಕಾರಣ ನಾವು ಮದುವೆಯನ್ನು ಆನ್‌ಲೈನ್‌ನಲ್ಲಿ ನಡೆಸಲು ತೀರ್ಮಾಸಿದೆವು ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು