News Karnataka Kannada
Monday, May 06 2024
ರಾಜಸ್ಥಾನ

ರಾಜಸ್ಥಾನ: ವಾಯುಸೇನೆಯ ಮಿಗ್ -21 ವಿಮಾನ ಪತನ

Rajastan Flight.12
Photo Credit :

ರಾಜಸ್ಥಾನ: ರಾಜಸ್ಥಾನದ ಜೈಸಲ್ಮೇರ್‌ನ ಇಂಡೋ-ಪಾಕ್ ಗಡಿ ಸಮೀಪದ ಸುದಾಸಿರಿ ಗ್ರಾಮದಲ್ಲಿ ನಿನ್ನೆ ರಾತ್ರಿ 8.30 ಕ್ಕೆ ಮಿಗ್-21 ವಿಮಾನ ಪತನವಾಗಿದ್ದು ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ಸಾವು ಕಂಡಿದ್ದಾರೆ.

ರಾಜಸ್ಥಾನದ ಪಶ್ಚಿಮ ವಲಯದಲ್ಲಿ ತರಬೇತಿ ವೇಳೆ ದುರ್ಘಟನೆ ಸಂಭವಿಸಿದೆ. ವಾಯುಸೇನೆ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದ್ದು, ಘಟನೆಯ ತನಿಖೆಗೆ ಆದೇಶಿಸಲಾಗಿದೆ.

ಜೈಸಲ್ಮೇರ್‌ನ ಇಂಡೋ-ಪಾಕ್ ಗಡಿ ಸಮೀಪದ ಸುದಾಸಿರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸ್ಯಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ಡೆಸರ್ಟ್ ನ್ಯಾಷನಲ್ ಪಾರ್ಕ್ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ ಎಂದು ಜೈಸಲ್ಮೇರ್ ಎಸ್‌ಪಿ ಅಜಯ್ ಸಿಂಗ್ ಹೇಳಿದ್ದಾರೆ.

ಐಎಎಫ್ ಟ್ವಿಟ್ಟರ್‌ನಲ್ಲಿ, ರಾತ್ರಿ 8.30 ರ ಸುಮಾರಿಗೆ, ಐಎಎಫ್‌ನ ಮಿಗ್ -21 ವಿಮಾನವು ಪಶ್ಚಿಮ ವಲಯದಲ್ಲಿ ತರಬೇತಿಯ ಸಮಯದಲ್ಲಿ ಹಾರುವ ಅಪಘಾತಕ್ಕೆ ಒಳಗಾಗಿದೆ. ತನಿಖೆಗೆ ಆದೇಶ ನೀಡಲಾಗಿದೆ. ವಿಮಾನ ಅಪಘಾತದಲ್ಲಿ ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ನಿಧನರಾಗಿದ್ದಾರೆ. ಅವರ ಕುಟುಂಬದೊಂದಿಗೆ ನಾವಿದ್ದೇವೆ ಎಂದು ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು