News Karnataka Kannada
Monday, May 06 2024
ದೇಶ

ತಾಯಿಗಾಗಿ ಅಡುಗೆ ತಯಾರಿಸಿದ ರಾಹುಲ್​​​ ಗಾಂಧಿ: ವಿಡಿಯೋ ವೈರಲ್

Raga
Photo Credit : News Kannada

ನವದೆಹಲಿ: ಕಾಂಗ್ರೆಸ್​ ನಾಯಕ, ಸಂಸದ ರಾಹುಲ್​ ಗಾಂಧಿಯವರು ತಮ್ಮ ತಾಯಿ ಸೋನಿಯಾ ಗಾಂಧಿ ಜೊತೆ 2024 ಅನ್ನು ವಿಶೇಷವಾಗಿ ಬರಮಾಡಿಕೊಂಡಿದ್ದಾರೆ. ಅಮ್ಮನ ಜೊತೆ ಸೇರಿ ಕಿತ್ತಳೆ ಜಾಮ್ ಯನ್ನು ತಯಾರಿ ಮಾಡುವ ಮೂಲಕ ಹೊಸ ವರ್ಷವನ್ನು ಆಚರಣೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

ಐಎನ್​ಸಿ ಕಾಂಗ್ರೆಸ್​​ನ ಅಧಿಕೃತ ಟ್ವಿಟರ್​ನಲ್ಲಿ ರಾಹುಲ್ ಗಾಂಧಿಯವರು ತಯಾರಿಸಿದ ಆರೆಂಜ್ ಮರ್ಮಾಲಡ್ ವಿಡಿಯೋವನ್ನು ಶೇರ್ ಮಾಡಲಾಗಿದೆ. ವಿಡಿಯೋದಲ್ಲಿ ತಮ್ಮ ನಿವಾಸದ ಮುಂದಿರುವ ಕಿತ್ತಳೆ ಗಿಡಗಳ ಬಳಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ತೆರಳಿದ್ದಾರೆ. ಈ ವೇಳೆ ರಾಹುಲ್ ಗಾಂಧಿ ಆರೆಂಜ್ ಹಣ್ಣುಗಳನ್ನು ಕಿತ್ತುಕೊಂಡು ಒಂದು ಬುಟ್ಟಿಯಲ್ಲಿ ಹಾಕಿಕೊಂಡು ವಾಪಸ್ ಮನೆಯೊಳಗೆ ಬಂದಿದ್ದಾರೆ.

ಸೋನಿಯಾ ಗಾಂಧಿ ಮುಂದೆಯೇ ಮನೆಯಲ್ಲಿ ಕಿತ್ತಳೆ ಹಣ್ಣುಗಳನ್ನು ಪೀಸ್ ಪೀಸ್ ಮಾಡಿ, ಸ್ಟವ್​​ ಮೇಲಿರುವ ಪಾತ್ರೆಗೆ ಹಾಕಿ ಅದರಲ್ಲಿ ವಿವಿಧ ವಸ್ತುಗಳನ್ನ ಹಾಕಿ ಮರ್ಮಾಲಡ್ ತಯಾರಿಸಿದ್ದಾರೆ. ನನ್ನ ಸಹೋದರಿ ಪ್ರಿಯಾಂಕ ಗಾಂಧಿಯವರು ಅಡುಗೆಯನ್ನು ಚೆನ್ನಾಗಿ ಮಾಡುತ್ತಾರೆ. ಅವರಿಂದಲೇ ನಾನು ಆರೆಂಜ್ ಮರ್ಮಾಲಡ್ ಮಾಡಲು ಕಲಿತಿರುವುದು. ಬೆಸ್ಟ್ ಕುಕ್ ಮಾಡುವುದರಲ್ಲಿ ಅಮ್ಮನೇ ಮೇಲುಗೈ ಎಂದು ಹೇಳಿದ್ದಾರೆ.

ಕಾಂಗ್ರೆಸ್​ ನಾಯಕಿ ಮಾತನಾಡಿ, ನನ್ನ ಬಗ್ಗೆ ಹೆಚ್ಚಿನ ಜಾಗ್ರತೆಯನ್ನು ರಾಹುಲ್ ಗಾಂಧಿ ತೆಗೆದುಕೊಳ್ಳುತ್ತಾರೆ. ನನಗೇನಾದರೂ ಹುಷಾರಿಲ್ಲ ಅಂದರೆ ಪ್ರಿಯಾಂಕ, ರಾಹುಲ್ ಇಬ್ಬರು ತುಂಬಾ ಕೇರ್ ಮಾಡ್ತಾರೆ. ವಿದೇಶಗಳಿಗೆ ಹೋದರೆ ಅಲ್ಲಿನ ಫುಡ್ ಅಡ್ಜಸ್ಟ್​ ಆಗದ ಕಾರಣ, ಇಂಡಿಯನ್ ರೆಸ್ಟೋರೆಂಟ್ ಹುಡುಕಿ ಅಲ್ಲಿಗೆ ಹೋಗಿ ಊಟ ಮಾಡುತ್ತೇನೆ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು