ಚಂಡೀಗಡ: ಬಾಸ್ಕೆಟ್ಬಾಲ್ ಆಟಗಾರ್ತಿ ಮೇಲೆ ಮೂವರು ಯುವಕರು ಅತ್ಯಾಚಾರಕ್ಕೆ ಯತ್ನಿಸಿದ್ದು, ಆಕೆ ವಿರೋಧಿಸಿದಾಗ ಆಕೆಯನ್ನು ಕ್ರೀಡಾಂಗಣದ ಛಾವಣಿಯಿಂದ ಕೆಳಗೆ ತಳ್ಳಿರುವ ಘಟನೆ ಪಂಜಾಬ್ನ ಮೊಗಾ ಜಿಲ್ಲೆಯಲ್ಲಿ ನಡೆದಿದೆ.
ತೀವ್ರ ಗಾಯಗೊಂಡ ಆಕೆಯನ್ನು ಲುಧಿಯಾನಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾಲು ಮತ್ತು ದವಡೆಗೆ ಚಿಕಿತ್ಸೆಗೆ ಪಡೆಯುತ್ತಿದ್ದಾರೆ.
ಈ ಘಟನೆ ಆಗಸ್ಟ್ 12ರಂದೇ ನಡೆದಿದ್ದು, ಮಗಳು ಅಭ್ಯಾಸ ನಡೆಸಲೆಂದು ಕ್ರೀಡಾಂಗಣಕ್ಕೆ ತೆರಳಿದ್ದಳು ಎಂದು ಕ್ರೀಡಾಳುವಿನ ತಂದೆ ದಾಖಲಿಸಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಪ್ರಕರಣದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ, ಒಬ್ಬ ಆರೋಪಿಯನ್ನು ಜತಿನ್ ಕಂಡ ಎಂದು ಗುರುತಿಸಲಾಗಿದೆ. ಆರೋಪಿಗಳ ಬಂಧನಕ್ಕೆ ಶೋಧ ನಡೆಸುತ್ತಿರುವುದಾಗಿ ಎಸ್ಪಿ ಗುಲ್ನೀತ್ ಖುರಾನಾ ಹೇಳಿದ್ದಾರೆ.