ಪಂಜಾಬ್: ಲುಧಿಯಾನದಲ್ಲಿ ಒಂದು ದಾರುಣ ಘಟನೆ ನಡೆದಿದ್ದು ಅಂಬೆಗಾಲಿಡುವ 1.5 ವರ್ಷದ ಹೆಣ್ಣುಮಗು ಎಕ್ಸ್ಪೈರಿ ಚಾಕೊಲೇಟ್ ಸೇವಿಸಿ ಸಾವನಪ್ಪಿದೆ.
ಲುಧಿಯಾನದ ನಿವಾಸಿಯಾಗಿರುವ ಮಗು ಪಟಿಯಲ್ ಶಾಪ್ನಿಂದ ಚಾಕಲೇಟ್ ಖರೀಧಿಸಿ ತಿಂದ ನಂತರ ರಕ್ತ ವಾಂತಿ ಶುರುವಾಗಿದ್ದು ನಂತರ ಸಾವನಪ್ಪಿದೆ. ಈ ಸಂಬಂಧ ಆಕ್ರೋಶ ಹೊರ ಹಾಕಿರುವ ಪೋಷಕರು, ಎಕ್ಸ್ಪೈರಿ ಚಾಕಲೇಟ್ ತಿಂದ ನಂತರ ನಮ್ಮ ಮಗಳು ಸಾವನಪ್ಪಿರುವುದಾಗಿ ಆರೋಪಿಸಿದ್ದಾರೆ.
ಪೋಷಕರ ಪ್ರತಿಭಟನೆಯಿಂದ ಪ್ರೇರೇಪಿಸಲ್ಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳು ಶಾಪ್ಗೆ ಭೆಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿ ತಪಾಸಣೆ ನಡೆಸುವ ಮೂಲಕ ಇನ್ನು ಬೇರೆ ಎಕ್ಸ್ಪೈರಿ ಉತ್ಪನ್ನಗಳ ಪರಿಶೀಲನೆ ನಡೆಸಿದ್ದಾರೆ.
1.5 yr old child from Ludhiana dies after consuming expiry chocolate. A few days ago, a girl from Patiala died after consuming cake.
Question: Is the food sampling department hibernating? pic.twitter.com/6S6gscz2bk— Taruni Gandhi (@TaruniGandhi) April 20, 2024