News Karnataka Kannada
Monday, April 29 2024
ಪಂಜಾಬ್

ಪಂಜಾಬ್ : ರಜಿಯಾ ಸುಲ್ತಾನಾ ಸಚಿವ ಸ್ಥಾನಕ್ಕೆ ರಾಜೀನಾಮೆ

New Project (4)
Photo Credit :

ಪಂಜಾಬ್ :  ನವಜೋತ್ ಸಿಂಗ್ ಸಿಧು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದ ಕೆಲವೇ ಗಂಟೆಗಳಲ್ಲಿ ಪಂಜಾಬ್ ಸಚಿವೆ ರಜಿಯಾ ಸುಲ್ತಾನಾ ಮಂಗಳವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಜಿಯಾ ಸುಲ್ತಾನಾ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ‘ನವಜೋತ್ ಸಿಂಗ್ ಸಿಧುಗೆ ಬೆಂಬಲ ಸೂಚಿಸಿ’ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.

ಮುಖ್ಯಮಂತ್ರಿ ಚರಣ್​​ಜಿ​ತ್ ಸಿಂಗ್ ಚನ್ನಿ ನೇತೃತ್ವದ ಪಂಜಾಬ್ ಕ್ಯಾಬಿನೆಟ್‌ನಲ್ಲಿ ನೀರು ಸರಬರಾಜು ಮತ್ತು ನೈರ್ಮಲ್ಯ, ಸಾಮಾಜಿಕ ಭದ್ರತೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮುದ್ರಣ ಮತ್ತು ಸ್ಟೇಷನರಿ ವಿಭಾಗಗಳ ಹೊಣೆಯನ್ನು ರಜಿಯಾ ಅವರಿಗೆ ನೀಡಲಾಗಿತ್ತು.

ರಾಜೀನಾಮೆ ಸಲ್ಲಿಸಿದ ನಂತರ ಮಾಧ್ಯಮದವರಲ್ಲಿ ಮಾತನಾಡಿದ ರಜಿಯಾ, ಸಿಧು ಸಾಹಬ್ ಸಿದ್ಧಾಂತಗಳ ವ್ಯಕ್ತಿ. ಅವರು ಪಂಜಾಬ್ ಮತ್ತು ಪಂಜಾಬಿಯತ್​​ಗಾಗಿ ಹೋರಾಡುತ್ತಿದ್ದಾರೆ ಎಂದಿದ್ದಾರೆ.

55 ವರ್ಷದ ರಜಿಯಾ ಸುಲ್ತಾನಾ ಅವರು 2002 ರಲ್ಲಿ ಮೊದಲ ಬಾರಿಗೆ ಪಂಜಾಬ್ ವಿಧಾನ ಸಭೆಗೆ ಆಯ್ಕೆಯಾದರು ನಂತರ 2007 ರಲ್ಲಿ ಮತ್ತು 2017 ರಲ್ಲಿ ಮತ್ತೆ ಆಯ್ಕೆಯಾಗಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು