Categories: ಪಂಜಾಬ್

ಪಂಜಾಬ್‌ ಮುಖ್ಯ ಮಂತ್ರಿಗಳ ಸಲಹೆಗಾರನ ಹುದ್ದೆಗೆ ಪ್ರಶಾಂತ್​ ಕಿಶೋರ್​ ರಾಜಿನಾಮೆ

ಚಂಡೀಘಡ ; ಪಂಜಾಬ್‌ ರಾಜ್ಯದ ಮುಖ್ಯ ಮಂತ್ರಿ ಕ್ಯಾಪ್ಟನ್‌ ಅಮರೀಂದರ್ ಸಿಂಗ್‌ ಅವರಿಗೆ ಚುನಾವಣಾ ತಜ್ಞ ಹಾಗೂ ಮುಖ್ಯ ಮಂತ್ರಿಗಳ ಸಲಹೆಗಾರ ಪ್ರಶಾಂತ್‌ ಕಿಶೋರ್‌ ಅವರು ಗುರುವಾರ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ಅವರು “ಸಕ್ರಿಯ ರಾಜಕೀಯದಿಂದ ತಾತ್ಕಾಲಿಕ ವಿರಾಮ ತೆಗೆದುಕೊಳ್ಳುತ್ತಿರುವ ಕಾರಣ” ಸಲಹೆಗಾರನ ಸ್ಥಾನದಿಂದ ಕೆಳಗಿಳಿಯುವುದಾಗಿ ಹೇಳಿದ್ದಾರೆ.
2017 ರ ವಿಧಾನಸಭಾ ಚುನಾವಣೆಯಲ್ಲಿ ಅಮರೀಂದರ್ ಗೆಲುವಿನ ಹಿಂದೆ ಇದ್ದಿದ್ದು ಇದೇ ಕಿಶೋರ್ ಅವರ ಯಶಸ್ವಿ ಮಾರ್ಗದರ್ಶನ, ಏಕೆಂದರೆ ಆಮ್ ಆದ್ಮಿ ಪಕ್ಷದ (ಎಎಪಿ) ಉದಯದೊಂದಿಗೆ ಕಠಿಣ ರಾಜಕೀಯ ಕದನ ಪಂಜಾಬ್​ನಲ್ಲಿ ಉಂಟಾಗಿತ್ತು, ಈ ವೇಳೆ ಕ್ಯಾಪ್ಟನ್​ ಕೈ ಹಿಡಿದ ಕಿಶೋರ್​ಅವರನ್ನು “ಪಂಜಾಬಿನ ಕ್ಯಾಪ್ಟನ್” ಎಂದು ಕರೆದರು. ಇದೇ ಅವರ ಗೆಲುವಿಗೆ ಕಾರಣವಾಯಿತು ಎಂದು ಹೇಳಲಾಗಿದೆ. ಕೆಲವು ತಿಂಗಳ ಹಿಂದೆ, ಕಿಶೋರ್ ಅವರು 2022 ರಾಜ್ಯ ಚುನಾವಣೆ ಹತ್ತಿರವಿರುವ ಕಾರಣ ಮತ್ತೊಮ್ಮೆ ಸಲಹೆಗಾರನ ಪಾತ್ರವನ್ನು ವಹಿಸಿಕೊಳ್ಳುವಂತೆ ಕೇಳಲಾಗಿತ್ತು.
ಆದರೆ ಕಿಶೋರ್ ರಾಜೀನಾಮೆ ಕೊಟ್ಟ ಕಅರಣದಿಂದ ಪಂಜಾಬ್ ಕಾಂಗ್ರೆಸ್‌ನಲ್ಲಿ ಸಿಎಂ ಈಗ ಹೆಚ್ಚು ಏಕಾಂಗಿಯಾಗುತ್ತಿದ್ದಾರೆ ಎಂಬ ಊಹಾಪೋಹಕ್ಕೆ ಕಾರಣವಾಗಿದೆ. ಪಂಜಾಬ್ ಕಾಂಗ್ರೆಸ್ ನ ಅಧ್ಯಕ್ಷಗಿರಿಯನ್ನು ನವಜೋತ್ ಸಿಂಗ್ ಸಿಧುಗೆ ವಹಿಸಿದ ಕೆಲ ದಿನಗಳ ನಂತರ ಕಿಶೋರ್ ರಾಜೀನಾಮೆ ನೀಡಿದ್ದಾರೆ. ಸಿಧು ಅವರ ಔಪಚಾರಿಕ ನೇಮಕಾತಿಗೆ ಮುಂಚೆಯೇ, ಕಿಶೋರ್ ಸಿಧು ಜೊತೆ ನೇರ ಸಂಪರ್ಕದಲ್ಲಿದ್ದರು ಎಂದು ಉನ್ನತ ಮೂಲಗಳು ಬಹಿರಂಗಪಡಿಸಿವೆ.
“ಸಿಧು ನೇಮಕಾತಿಯ ವಿಷಯದಲ್ಲೇ ಕ್ಯಾಪ್ಟನ್​ ತಗಾದೆ ತೆಗೆದಿದ್ದರು, ಈಗ ಕಿಶೋರ್​ ರಾಜಿನಾಮೆಯಿಂದ ರಾಜ್ಯ ರಾಜಕಾರಣದಲ್ಲಿ ಕ್ಯಾಪ್ಟನ್ ಸಂಪೂರ್ಣವಾಗಿ ಏಕಾಂಗಿಯಾಗಬಹುದು ಎಂದು ಸೂಚಿಸುತ್ತದೆ “ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

Indresh KC

Recent Posts

ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

ಇಲ್ಲಿನ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ ಹಂತಕ ಗಿರೀಶ ಉರುಫ್‌ ವಿಶ್ವ ಸಾವಂತ ವಿರುದ್ಧ ಬೆಂಡಿಗೇರಿ ಠಾಣೆಯಲ್ಲಿ ಮತ್ತೊಂದು ಪ್ರಕರನ…

31 mins ago

ʼರಾಹುಲ್ ಮತ್ತು ನಾನು ಒಟ್ಟಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ ಬಿಜೆಪಿ ಲಾಭವಾಗುತ್ತಿತ್ತುʼ

ದೇಶದ್ಯಾಂತ ಕಾಂಗ್ರೆಸ್‌ ಪಕ್ಷದ ಪರವಾಗಿ ಪ್ರಚಾರ ನಡೆಸಬೇಕೆಂಬ ಉದ್ದೇಶದಿಂದ ನಾನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ, ರಾಹುಲ್ ಗಾಂಧಿ…

34 mins ago

ಪೊಲೀಸ್‌ ಕಸ್ಟಡಿಯಲ್ಲಿಯೇ ದಂಪತಿ ಆತ್ಮಹತ್ಯೆ: ರೊಚ್ಚಿಗೆದ್ದು ಠಾಣೆಗೆ ಬೆಂಕಿ ಹಚ್ಚಿದ ಗ್ರಾಮಸ್ಥರು

ಪೊಲೀಸ್‌ ಕಸ್ಟಡಿಯಲ್ಲಿಯೇ ಗಂಡ ಹಾಗೂ ಹೆಂಡತಿ ಮೃತಪಟ್ಟಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ.

57 mins ago

ಆತ್ಮಹತ್ಯೆಗೆ ಮುನ್ನ ನಟ ಚಂದು ಲಾಸ್ಟ್​ ಮೆಸೇಜ್​ ಇದು

ಇದು ತೆಲುಗು ಕಿರುತೆರೆ ನಟ ಚಂದು ಆತ್ಮಹತ್ಯೆಗೂ ಮುನ್ನ ಬರೆದ ಸಂದೇಶ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚಂದುವಿನ ಕೊನೆಯ ಮೆಸೇಜ್​…

1 hour ago

ಕರ್ನಾಟಕದ ಹಲವೆಡೆ ಮೇ 19ರಿಂದ 21 ರವರೆಗೆ ಭಾರೀ ಮಳೆ ಸಾಧ್ಯತೆ

ಕರ್ನಾಟಕದ ಹಲವೆಡೆ ಮೇ 19ರಿಂದ 21 ರವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

1 hour ago

ಜೀವ -ಜಲ ಉಳಿಸಲು ಸ್ವಯಂ ಪ್ರೇರಣೆಯ ಪಾಲ್ಗೊಳ್ಳುವಿಕೆ ಮುಖ್ಯ: ಪ್ರಭಾಕರ ಶರ್ಮಾ

ನೀರಿನ ಮಿತ ಬಳಕೆ, ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕರು  ಸ್ವಯಂ ಪ್ರೇರಿತರಾಗಿ ತಮ್ಮ ಇತಿ ಮಿತಿಯಲ್ಲಿ ಸಣ್ಣ ಕೊಡುಗೆಗಳನ್ನು ನೀಡುವ ಮೂಲಕ…

1 hour ago