ಒಡಿಶಾ: ಒಡಿಶಾದ ಕಾಡಿನಲ್ಲಿ ಕಪ್ಪು ಚಿರತೆ ಪತ್ತೆಯಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಹುಲಿ ಗಣತಿ ಸಂದರ್ಭದಲ್ಲಿ, ಇದೀಗ ಕಪ್ಪು ಚಿರತೆ ಪತ್ತೆಯಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಯೊಬ್ಬರು ಎಕ್ಸ್ನಲ್ಲಿ ಹಂಚಿಕೊಂಡಿದೆ. ಈ ಕಪ್ಪು ಚಿರತೆ ಅರಣ್ಯಾಧಿಕಾರಿಗಳು ಹುಲಿಗಳ ಗಣತಿಗಾಗಿ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಕಪ್ಪು ಚಿರತೆ ಫೋಟೋಗಳು ಈ ಕ್ಯಾಮರದಲ್ಲಿ ಸೆರೆಯಾಗಿದೆ. ಈ ಫೋಟೋಗಳನ್ನು ಎಕ್ಸ್ನಲ್ಲಿ ವನ್ಯಜೀವಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಸುಸಂತ ನಂದಾ ಹಂಚಿಕೊಂಡಿದ್ದಾರೆ.
ಈ ಹಿಂದೆ, ಮಯೂರ್ಭಂಜ್ ಜಿಲ್ಲೆಯ ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನವನದಲ್ಲಿ ಕಪ್ಪು ಹುಲಿ ಕಾಣಿಸಿಕೊಂಡಿತ್ತು.
On going camera trap tiger census in Odisha is throwing up some exciting & unexpected presence of wild fauna in our state. pic.twitter.com/zRGnh9tcIv
— Susanta Nanda (@susantananda3) November 29, 2023