ನವದೆಹಲಿ: ದೇಶದಲ್ಲಿ 77ನೇ ಸ್ವಾತಂತ್ರೋತ್ಸವದ ಸಂಭ್ರಮದ ಸಲುವಾಗಿ ಇಂದಿನಿಂದ ಮೂರು ದಿನಗಳ ಕಾಲ ಹರ್ ಘರ್ ತಿರಂಗಾ ಅಭಿಯಾನ ನಡೆಯಲಿದೆ. ಇದರ ಭಾಗವಾಗಿ ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಾಟಕ್ಕೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಅಲ್ಲದೇ ನೀವು ಧ್ವಜ ಹಾರಿಸಿದ ಪೋಟೋವನ್ನು ಕೂಡ ಪ್ರಧಾನಿಯವರಿಗೆ ಕಳುಹಿಸಬಹುದಾಗಿದೆ.
ಆಗಸ್ಟ್ 13ರ ಇಂದಿನಿಂದ ಆಗಸ್ಟ್.15ರವರೆಗೆ ಹರ್ ಘರ್ ತಿರಂಗಾ ಅಭಿಯಾನ ನಡೆಯಲಿದೆ. ಈ ಅಭಿಯಾನದಲ್ಲಿ ನಾನು ಪಾಲ್ಗೊಳ್ಳಲಿದ್ದು, ದೇಶದ ಎಲ್ಲರೂ ಪಾಲ್ಗೊಂಡು, ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಾಡಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಇನ್ನೂ ಮನೆ ಮನೆಯಗಳಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸಿ, ಅದರ ಪೋಟೋಗಳನ್ನು ಹಂಚಿಕೊಳ್ಳುವಂತೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.
ನೀವು https://harghartiranga.com/ ನಲ್ಲಿ ಆ ಪೋಟೋಗಳನ್ನು ಅಪ್ ಲೋಡ್ ಮಾಡಬಹುದಾಗಿದೆ.