News Karnataka Kannada
Tuesday, May 07 2024
ದೇಶ

ಇನ್ಸ್ಟಾಗ್ರಾಮ್‌ ಪ್ರಿಯಕರನನ್ನ ಭೇಟಿಯಾಗಲು ಪಾಕ್ ಗೆ ಹೊರಟಿದ್ದ 16ರ ಹುಡುಗಿ ಅರೆಸ್ಟ್‌

insta love
Photo Credit : News Kannada

ಜೈಪುರ: ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದ ಗೆಳೆಯನನ್ನ ಭೇಟಿಯಾಗಲು ಪಾಕಿಸ್ತಾನಕ್ಕೆ ಹೊರಟಿದ್ದ ರಾಜಸ್ಥಾನದ 16 ವರ್ಷದ ಹುಡುಗಿಯನ್ನ ಜೈಪುರ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಇತ್ತೀಚೆಗೆ ಆನ್‌ಲೈನ್‌ನಲ್ಲಿ ಪರಿಚಯವಾದ ಯುವಕ-ಯುವತಿಯರ ಪ್ರೇಮ ಪ್ರಕರಣಗಳು ಹೆಚ್ಚಾಗುತ್ತಿರುವ ಹೊತ್ತಿನಲ್ಲೇ ಮತ್ತೊಂದು ಕೇಸ್‌ ಬೆಳಕಿಗೆ ಬಂದಿದೆ. ಅಂಜು ಎಂಬ ಭಾರತೀಯ ಮಹಿಳೆ ಇತ್ತೀಚಿಗೆ ಪಾಕಿಸ್ತಾನಕ್ಕೆ ತೆರಳಿ ಸ್ನೇಹಿತ ನಸ್ರುಲ್ಲಾ ಎಂಬವನನ್ನ ಮದುವೆಯಾದ ಸುದ್ದಿಯಾದ ಬೆನ್ನಲ್ಲೇ ರಾಜಸ್ಥಾನದ ಸಿಕರ್‌ ಜಿಲ್ಲೆಯ ಶ್ರೀಮಾಧೋಪುರ್‌ ಪ್ರದೇಶದ ನಿವಾಸಿ 16ವರ್ಷದ ಹುಡುಗಿ ತನ್ನ ಪ್ರಿಯಕರನ ಭೇಟಿಗೆ ದೇಶಬಿಟ್ಟು ಹೋಗಲು ಯತ್ನಿಸಿದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ.

ಪಾಕಿಸ್ತಾನಕ್ಕೆ ಹೋಗಲು ಮುಂದಾದಾಗ ವಿಮಾನ ಟಿಕೆಟ್‌ ತೋರಿಸುವಂತೆ ಕೇಳಿದ್ದಾರೆ. ಅನುಮಾನಗೊಂಡ ಸಿಬ್ಬಂದಿ ವಿಚಾರಿಸಿದಾಗ ಹುಡುಗಿ ಸುಳ್ಳು ಹೇಳಿ ಟಿಕೆಟ್‌ ಪಡೆಯಲು ಪ್ರಯತ್ನಿಸುತ್ತಿದ್ದಾಳೆ ಎಂಬ ಸಂಶಯ ಮೂಡಿದೆ. ನಂತರ ಆಕೆಯನ್ನ ಬಂಧಿಸಿ ವಿಚಾರಣೆ ನಡೆಸಲು ವಲಸೆ ವಿಭಾಗದ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸದ್ಯ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು