ಮೆಟಾ ತನ್ನ ಟ್ವಿಟ್ಟರ್ ಪ್ರತಿಸ್ಪರ್ಧಿ ಥ್ರೆಡ್ಸ್ ಆ್ಯಪ್ ಅನ್ನು ಭಾರತ ಸೇರಿದಂತೆ ಜಾಗತಿಕವಾಗಿ ಬಿಡುಗಡೆ ಮಾಡಿದೆ. ಹೊಸ ಅಪ್ಲಿಕೇಶನ್ ಆಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ ಪ್ಲೇ ಸ್ಟೋರ್ನಲ್ಲಿ ಮತ್ತು ಐಫೋನ್ ಬಳಕೆದಾರರಿಗೆ ಆ್ಯಪ್ ಸ್ಟೋರ್ನಲ್ಲಿ ಉಚಿತವಾಗಿ ಡೌನ್ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಬುಧವಾರ ಮಧ್ಯರಾತ್ರಿ ಯುಕೆಯಲ್ಲಿ ಥ್ರೆಡ್ಸ್ ಅಪ್ಲಿಕೇಶನ್ ಲೈವ್ ಮಾಡಲಾಯಿತು. ಇದೀಗ ಅಮೆರಿಕಾ, ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ, ಭಾರತ ಮತ್ತು ಜಪಾನ್ ಸೇರಿದಂತೆ 100 ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ. ಇದು ಕಟ್ಟುನಿಟ್ಟಾದ ಡೇಟಾ ಗೌಪ್ಯತೆ ನಿಯಮಗಳನ್ನು ಹೊಂದಿದೆ ಎಂದು ಕಂಪನಿ ಹೇಳಿದೆ. ದಿ ವರ್ಜ್ ವರದಿಯ ಪ್ರಕಾರ, ಕೇವಲ ಎರಡು ಗಂಟೆಗಳಲ್ಲಿ ಥ್ರೆಡ್ಸ್ ಅಪ್ಲಿಕೇಶನ್ 2 ಮಿಲಿಯನ್ಗಿಂತಲೂ ಹೆಚ್ಚು ಬಳಕೆದಾರರ ನೋಂದಣಿಗೆ ಸಾಕ್ಷಿಯಾಗಿದೆ.
ಬಳಕೆದಾರರು ತಮ್ಮ ಇನ್ಸ್ಟಾಗ್ರಾಮ್ ಆಕೌಂಟ್ ಮೂಲಕ ಥ್ರೆಡ್ಸ್ಗೆ ಲಿಂಕ್ ಮಾಡಬಹುದು. ಇನ್ಸ್ಟಾದ ಯೂಸರ್ ನೇಮ್ ಥ್ರೆಡ್ಸ್ನಲ್ಲೂ ಮುಂದುವರೆಸಬಹುದು. ವಿಶೇಷ ಎಂದರೆ, ಬಳಕೆದಾರರ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಬ್ಲೂ ಟಿಕ್ ಇದ್ದರೆ ಅದು ಥ್ರೆಡ್ಸ್ನಲ್ಲಿ ಕಾಣಿಸಲಿದೆ.