ಮಣಿಪುರ: ಅಂಡಮಾನ್ ಬಳಿಕ ಇದೀಗ ಮಣಿಪುರದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.2 ತೀವ್ರತೆ ದಾಖಲಾಗಿದೆ. ಮಣಿಪುರದ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಭೂಕಂಪ ಸಂಭವಿಸಿದೆ.
ಇಂದು(ಅ.08) ಮುಂಜಾನೆ ಅಂಡಮಾನ್ ಸಮುದ್ರದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಅಕ್ಟೋಬರ್ 8 ರಂದು ಬೆಳಗಿನ ಜಾವ 3.20ಕ್ಕೆ ಕಂಪನ ಸಂಭವಿಸಿದೆ. ಎನ್ಸಿಎಸ್ ಪ್ರಕಾರ, ಭೂಕಂಪವು 10 ಕಿ.ಮೀ ಆಳದಲ್ಲಿತ್ತು. 4.3 ತೀವ್ರತೆ ಭೂಕಂಪನ ಉಂಟಾಗಿದ್ದು, ಸ್ಥಳ: ಅಂಡಮಾನ್ ಸಮುದ್ರ, ಭಾರತ ಎಂದು ಎನ್ಸಿಎಸ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಅಫ್ಘಾನಿಸ್ತಾನದ ಪಶ್ಚಿಮ ಭಾಗದಲ್ಲಿ ಶನಿವಾರ ಸಂಭವಿಸಿದ 6.3 ತೀವ್ರತೆಯ ಪ್ರಬಲ ಭೂಕಂಪನದಿಂದ ಕನಿಷ್ಠ 120 ಮಂದಿ ಮೃತಪಟ್ಟಿದ್ದು, 1,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿತ್ತು.