News Karnataka Kannada
Friday, May 03 2024
ಮಹಾರಾಷ್ಟ್ರ

ಶಾಕಿಂಗ್‌ ನ್ಯೂಸ್‌: ಎನ್‌ ಸಿಸಿ ವಿದ್ಯಾರ್ಥಿಗಳಿಗೆ ಘನಘೋರ ಶಿಕ್ಷೆ

Shocking News: NCC students sentenced to rigorous imprisonment
Photo Credit : IANS

ಥಾಣೆ: ಮಹಾರಾಷ್ಟ್ರದ ಥಾಣೆಯಲ್ಲಿರುವ ವಿದ್ಯಾ ಪ್ರಸಾರಕ್ ಮಂಡಲ್ ಕಾಲೇಜಿನಲ್ಲಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ತರಬೇತಿ ಪಡೆಯುತ್ತಿದ್ದ ಕೆಲ ವಿದ್ಯಾರ್ಥಿಗಳನ್ನು ಕ್ರೂರವಾಗಿ ಥಳಿಸಿದ ಘಟನೆ ವರದಿಯಾಗಿದೆ.

ಹಿರಿಯ ಎನ್‌ಸಿಸಿ ತರಬೇತುದಾರರು ಜೂನಿಯರ್ ವಿದ್ಯಾರ್ಥಿಗಳಿಗೆ ಕಾರ್ಪೋರಲ್ ಶೈಲಿಯಲ್ಲಿ ಥಳಿಸುವ ವೀಡಿಯೊ ಹೊರಬಂದಿದೆ. ವೀಡಿಯೊದಲ್ಲಿ ಅರ್ಧ ಡಜನ್ ಎನ್‌ಸಿಸಿ ವಿದ್ಯಾರ್ಥಿಗಳನ್ನು ಮಳೆನೀರು ಮತ್ತು ಕೆಸರು ತುಂಬಿದ ನೆಲದ ಮೇಲೆ ಮಲಗಿಸಲಾಗಿದ್ದು, ಅವರಿಗೆ ಹಿರಿಯ ತರಬೇತುದಾರರು ಮೃಗೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದಾರೆ.

ಭಯಭೀತರಾದ ವಿದ್ಯಾರ್ಥಿಗಳು ಅಳುವುದು ವಿಡಿಯೋದಲ್ಲಿದ್ದು, ಹೊಡೆಯದಂತೆ ಗೋಗರೆಯುವುದನ್ನು ಕಾಣಬಹುದಾಗಿದೆ. ಈ ಘಟನೆ ವೈರಲ್‌ ಆಗುತ್ತಿದ್ದಂತೆ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಹಿರಿಯ ನಾಯಕ ಜಿತೇಂದ್ರ ಅವದ್ ಅವರು ಆಘಾತ ವ್ಯಕ್ತಪಡಿಸಿದ್ದಾರೆ. ಸರ್ಕಾರವು ಈ ವಿಷಯದಲ್ಲಿ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯೆ ಪಡೆಯಲು ಐಎಎನ್‌ ಎಸ್‌ ಪ್ರಯತ್ನ ನಡೆಸಿದ ಹೊರತಾಗಿಯೂ ವಿದ್ಯಾಪ್ರಸಾರಕ್‌ ಮಂಡಲ ಅಧಿಕಾರಿಗಳು, ಪ್ರತಿಕ್ರಿಯೆ ನೀಡಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು