News Karnataka Kannada
Monday, April 29 2024
ಮಹಾರಾಷ್ಟ್ರ

ಮುಂಬೈ,: ಬ್ಯಾಂಕಾಕ್‌ – ಮುಂಬೈ ವಿಮಾನ ಗಗನಸಖಿಗೆ ಕಿರುಕುಳ, ಸ್ವೀಡಿಷ್‌ ಪ್ರಜೆ ಬಂಧನ ಬಿಡುಗಡೆ

ಇಂಡಿಗೋ ಸಂಸ್ಥೆ ಲಕ್ಷದ್ವೀಪದ ಅಗತ್ತಿ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನಿಂದ ನೇರ ಫ್ಲೈಟ್ ಸೇವೆಯನ್ನು ಮಾರ್ಚ್ 31ರಿಂದ ಆರಂಭಿಸುತ್ತಿದೆ.
Photo Credit : Facebook

ಮುಂಬೈ,: ಮದ್ಯದ ಅಮಲಿನಲ್ಲಿ ಬ್ಯಾಂಕಾಕ್-ಮುಂಬೈ ವಿಮಾನದಲ್ಲಿ ಇಂಡಿಗೋ ಸಿಬ್ಬಂದಿಯನ್ನು ನಿಂದಿಸಿ ಮತ್ತು ಕಿರುಕುಳ ನೀಡಿದ ಆರೋಪದ ಮೇಲೆ ಸ್ವೀಡಿಷ್ ಪ್ರಜೆಯನ್ನು ಗುರುವಾರ ತಡರಾತ್ರಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ಇಲ್ಲಿ ತಿಳಿಸಿದ್ದಾರೆ.

ಇಂಡಿಗೋ ವಿಮಾನ (6E-1052) ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಅಸಭ್ಯ ವರ್ತನೆಯ ಆರೋಪದ ಮೇಲೆ ಕ್ಲಾಸ್ ಎರಿಕ್ ಹೆಚ್.ಜೆ. ವೆಸ್ಟ್‌ಬರ್ಗ್ (63) ಎಂಬುವರನ್ನು ಬಂಧಿಸಲಾಗಿದೆ. ಬಳಿಕ ಆತನನ್ನು ಶುಕ್ರವಾರ ಅಂಧೇರಿ ಮೆಟ್ರೋಪಾಲಿಟನ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಮತ್ತು 20 ಸಾವಿರ ರೂ. ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಆರೋಪಿಯು ಊಟದ ಸಮಯದಲ್ಲಿ ಸಮುದ್ರ-ಆಹಾರಕ್ಕೆ ಬೇಡಿಕೆಯಿಟ್ಟು ದಾಂಧಲೆ ನಡೆಸಿದ್ದಲ್ಲದೆ, ವಿಮಾನ ಮುಂಬೈ ನಿಲ್ದಾಣದಲ್ಲಿ ಇಳಿಯುವವರಿಗೆ ವಾಗ್ವಾದ ಮಾಡುವುದನ್ನು ಮುಂದುವರಿಸಿದ್ದನು ಎಂದು ಆರೋಪಿಸಲಾಗಿದೆ. ಗಗನಸಖಿ ಸಮುದ್ರಾಹಾರ ಲಭ್ಯವಿಲ್ಲ ಎಂದು ಮಾಹಿತಿ ನೀಡಿದರು ಮತ್ತು ಅವರಿಗೆ ಚಿಕನ್ ಬಡಿಸಿದರು. ಈ ವೇಳೆ ಕಾರ್ಡ್‌ ಮೂಲಕ ಹಣ ನೀಡುವಂತೆ ವಿಮಾನದ ಮಹಿಳಾ ಸಿಬ್ಬಂದಿ ಕೇಳಿಕೊಂಡರು. ಈ ವೇಳೆ ಆರೋಪಿಯು ಆಕೆಯ ಕೈಯನ್ನು ಹಿಡಿದೆಳಿದಿರುವುದಾಗಿ ಆರೋಪಿಸಲಾಗಿದೆ.

ನಂತರ ವಿಮಾನದ ಮಹಿಳಾ ಸಿಬ್ಬಂದಿ ಆತನನ್ನು ಆಸನದತ್ತ ತಳ್ಳಿದರು. ಅಲ್ಲದೇ ಕಾರ್ಡ್‌ ಮೂಲಕ ಹಣ ಪಾವತಿಸುವಂತೆ ವಿನಂತಿಸಿದರು. ಈ ವೇಳೆ ಆರೋಪಿ ಎರಿಕ್‌ ಎಲ್ಲರ ಮುಂದೆಯೇ ಆಕೆ ಮೇಲೆ ಬಹಿರಂಗ ಕಿರುಕುಳ ನೀಡಲು ಆರಂಭಿಸದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೇ ಎರಿಕ್‌ ಈ ವೇಳೆ ಮತ್ತೊಬ್ಬ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳೊಂದಿಗೆ ನಿಂದಿಸಲು ಆರಂಭಿಸಿದನು ಎನ್ನಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು