ಮುಂಬೈ: ಐಪಿಎಲ್ ನ ಮುಂಬೈ ಇಂಡಿಯನ್ಸ್ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ಶ್ರೀಲಂಕಾದ ಲಸಿತ್ ಮಲಿಂಗಾ ಅವರನ್ನು ನೇಮಕ ಮಾಡಲಾಗಿದೆ. ಶೇನ್ ಬಾಂಡ್ ನಿರ್ಗಮನದ ಬಳಿಕ ಖಾಲಿ ಇದ್ದ ಹುದ್ದೆಗೆ ಲಂಕಾದ ಮಾಜಿ ಕ್ರಿಕೆಟಿಗನನ್ನು ಮುಂಬೈ ಫ್ರಾಂಚೈಸಿ ನೇಮಕ ಮಾಡಿದೆ.
5 ಬಾರಿ ಚಾಂಪಿಯನ್ ಆಗಿರುವ ಮುಂಬೈ ತಂಡದಲ್ಲಿದ್ದ 40 ವರ್ಷದ ಲಸಿತ್ ಮಲಿಂಗಾ ಅವರು ಮಾರ್ಕ್ ಬೌಷರ್ & ಅವರ ಮಾಜಿ ಸಹ ಆಟಗಾರ ಕಿರೋನ್ ಪೊಲ್ಲಾರ್ಡ್ ಅವರನ್ನೊಳಗೊಂಡ ಕೋಚಿಂಗ್ ತಂಡವನ್ನು ಸೇರಲಿದ್ದಾರೆ ಎಂದು ಫ್ರಾಂಚೈಸಿ ತಿಳಿಸಿದೆ.
ಈ ಮೂವರೂ ಕ್ರಿಕೆಟಿಗರು ಬಲಿಷ್ಠ ತಂಡ ಕಟ್ಟುವಲ್ಲಿ ನೆರವಾಗುವ ನಿರೀಕ್ಷೆಯನ್ನು ಫ್ರಾಂಚೈಸಿ ವ್ಯಕ್ತಪಡಿಸಿದೆ.